ʼಪ್ರೀತಿʼ ಒಪ್ಪಿಕೊಂಡ ಬಾಲಿವುಡ್ ಜೋಡಿ

ʼಪ್ರೀತಿʼ ಒಪ್ಪಿಕೊಂಡ ಬಾಲಿವುಡ್ ಜೋಡಿ

ಮುಂಬೈ,ಮೇ. 29, ನ್ಯೂಸ್‍ ಎಕ್ಸ್ ಪ್ರೆಸ್‍: ಬಾಲಿವುಡ್  ಮಲೈಕಾ ಅರೋರಾ, ಅರ್ಜುನ್ ಕಪೂರ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಅರ್ಜುನ್ ಹಾಗೂ ಮಲೈಕಾ ಅನೇಕ ಪಾರ್ಟಿಗಳಲ್ಲಿ, ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕರಣ್ ಜೋಹರ್, ಕರೀನಾ ಕಪೂರ್ ಖಾನ್ ಹಾಗೂ ಜಾಹ್ನವಿ ಕಪೂರ್ ಈ ಬಗ್ಗೆ ಸೂಕ್ಷ್ಮವಾಗಿ ಎಲ್ಲರಿಗೂ ತಿಳಿಸಿದ್ದರು. ಆದ್ರೆ ಮಲೈಕಾ, ಅರ್ಜುನ್ ಇದನ್ನು ಸ್ಪಷ್ಟಪಡಿಸಿರಲಿಲ್ಲ. ಈಗ ಮಲೈಕಾ ಹಾಗೂ ಅರ್ಜುನ್ ನಮ್ಮಿಬ್ಬರ ಮಧ್ಯೆ ಸಂಬಂಧವಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಈ ವೇಳೆ ಮಾಧ್ಯಮಗಳಿಗೂ ಅರ್ಜುನ್ ಧನ್ಯವಾದ ಹೇಳಿದ್ದಾರೆ. ಮಾಧ್ಯಮದವರು ನಮ್ಮ ಸಂಬಂಧವನ್ನು ಕೆಟ್ಟದಾಗಿ ತೋರಿಸಲಿಲ್ಲ. ಕೆಲವೊಮ್ಮೆ ನಮಗೆ ಖಾಸಗಿ ಸಮಯ ನೀಡಿದ್ದಾರೆ ಎಂದಿದ್ದಾರೆ. ಆದ್ರೆ ಯಾವಾಗ ಮದುವೆ ಎಂಬುದನ್ನು ಮಾತ್ರ ಜೋಡಿ ಇನ್ನೂ ಹೇಳಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos