ಸಿಂಧೂರಿ ವರ್ಗಾವಣೆಗೂ ನನಗೂ ಸಂಬಂದವಿಲ್ಲ

ಸಿಂಧೂರಿ ವರ್ಗಾವಣೆಗೂ ನನಗೂ ಸಂಬಂದವಿಲ್ಲ

ಬೆಂಗಳೂರು, ಸೆ. 25: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೂ ನನಗೂ ಸಂಬಂದ ಇಲ್ಲ ಎಂದು ಸ್ಪಷ್ಟಪಡಿಸಿರುವ ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ವೃಥಾ ನನ್ನ ಹೆಸರನ್ನು ಎಳೆದು ತರಲಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ಕಾಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಆಗಿದ್ದ ಸಿಂಧೂರಿ ನೆರೆ ಪರಿಹಾರ ವಿತರಣೆಗೆ ಹಣ ವರ್ಗಾವಣೆಗೆ ಒಪ್ಪಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಮಾಡಲಾಗಿತ್ತು. ಸಿಂಧೂರಿ ವರ್ಗಾವಣೆ ಹಿಂದೆ ಕಾರ್ಯದರ್ಶಿ ಪಿ.ಮಣಿವಣ್ಣನ್ ಕೈವಾಡ ಇದೆಯೆಂದು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕಾರ್ಮಿಕರ ಸಹಾಯವಾಣಿಗೆ ಸಂಭಂದಿಸಿದಂತೆ ಕಿಯೋನಿಕ್ಸ್ಗೆ ಟೆಂಡರ್ ನೀಡುವಂತೆ ಒತ್ತಡ ಹೇರಿಲ್ಲ.ಕಾನೂನು ಪ್ರಕಾರ ಟೆಂಡರ್ ಕರೆಯುವಂತೆ ಪತ್ರ ಮುಖೇನ ಸೂಚಿಸಿದ್ದೇನೆ. ಆದರೂ ಅವರ ವರ್ಗಾವಣೆಯಲ್ಲಿ ನನ್ನ ಹೆಸರು ತಳುಕು ಹಾಕಲಾಗಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡುವ ವಿವೇಚನಾಧಿಕಾರ ಇರುವುದು ಸರ್ಕಾರಕ್ಕೆ ರೋಹಿಣಿಯವರನ್ನು ಮುಂದುವರಿಸುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಕಾರ್ಮಿಕ ಇಲಾಖೆಯಲ್ಲೇ ಮುಂದುವರಿಸಿದರೂ ನನ್ನ ಅಭ್ಯಂತರ ಇಲ್ಲವೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂ,ಪಿಎಂಗೆ ಪತ್ರ

ಕಾರ್ಮಿಕ ಮಂಡಳಿಯಲ್ಲಿ ಕಾರ್ಯದರ್ಶಿಯಾಗಿದ್ದ ರೋಹಿಣಿ ಸಿಂಧೂರಿ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿಲ್ಲ. ಆಧಾರ್ ಲಿಂಕ್‌ನಲ್ಲಿ ತೊಂದರೆ ಆಗಿರುವ ಕಾರಣ ಕಾರ್ಮಿಕರಿಗೆ ತಲುಪಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ.1600 ಕಾರ್ಮಿಕರು ರಾಜ್ಯದಲ್ಲಿ ವಿವಿಧ ಕಾರಣಗಳಿಂದಾಗಿ ಮೃತಪಟ್ಟಿದ್ದರೂ ಪರಿಹಾರ ನೀಡಿಲ್ಲ ಎಂದು ವಿವಿಧ ಕಾರ್ಮಿಕ ಸಂಘಟನೆಗಳು ಮುಖ್ಯಮಂತ್ರಿ ಯಡಿಯೂರಪ್ಪಗೆ ದೂರು ನೀಡಿದ್ದರು.

ಮುಖ್ಯಮಂತ್ರಿಗಳ ಮುಖಾಂತರ ಪ್ರಧಾನಿ ಮೋದಿ ಅವರಿಗೂ ಪತ್ರ ಕಳುಹಿಸಲಾಗಿತ್ತು. ರೋಹಿಣಿ ಅವರ ಮೇಲೆ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ಮೂರು ದಿನಗಳ ಹಿಂದೆ ರೇಷ್ಮೆ ಇಲಾಖೆಗೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರೋಹಿಣಿ ವರ್ಗಾವಣೆ ವಿವಾದಕ್ಕೆ ಕಾರಣವಾಗಿತ್ತು. ರೋಹಿಣಿ ಹಾಸನ ಜಿಲ್ಲಾಧಿಕಾರಿಯಾಗಿದ್ದಾಗಲೂ ವಿವದಕ್ಕೊಳಗಾಗಿದ್ದರು. ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎ.ಮಂಜು ಅವರೊಂದಿಗೆ ಸಂಘರ್ಷಕ್ಕಿಳಿದಿದ್ದರು. ಆಗ ಮಾಜಿ ಪ್ರಧನಿ ದೇವೇಗೌಡರು ಸಿಂಧೂರಿ ಬೆಂಬಲಕ್ಕೆ ನಿಂತಿದ್ದರು.

ಮೈತ್ರಿ ಸಕಾರದ ಆಡಳಿತಾವದಿಯಲ್ಲಿ ಮತ್ತೆ ಉಸ್ತುವಾರಿ ಸಚಿವರಾದ ಹೆಚ್.ಡಿ.ರೇವಣ್ಣ ಅವರೊಂದಿಗೆ ಜಟಾಪಟಿ ನಡೆದು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು. ರೋಹಿಣಿ ಕರ್ತವ್ಯ ನಿರ್ವಹಣೆ ಮಾಡಿದ  ಕಡೆಯಲ್ಲೆಲ್ಲಾ ವಿವಾದ ಸೃಷ್ಟಿಸಿಕೊಂಡು ವಗಾವಣೆಯಾಗಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos