ಸೂತಕದ ಮನೆ ಮುಂದೆ ನಡೆಯಿತು ಹೈಡ್ರಾಮ!    

ಸೂತಕದ ಮನೆ ಮುಂದೆ ನಡೆಯಿತು ಹೈಡ್ರಾಮ!    

ದೇವನಹಳ್ಳಿ, ಸೆ. 13: ಗಂಡ ಹೆಂಡತಿ ಜೊತೆಗೆ ಅಣ್ಣಾ ತಮ್ಮಂದಿರೆಲ್ಲ ಒಟ್ಟಾಗಿದ್ದ ಕುಟುಂಬ. ಆದರೆ, ಮೊದ ಮೊದಲು ಚೆನ್ನಾಗಿದ್ದ ಅಣ್ಣ ತಮ್ಮಂದಿರ ಕುಟುಂಬದಲ್ಲಿ ಉಂಟಾದ ಆಸ್ತಿ ಜಗಳ ಇಧೀಗ ಗೃಹಿಣಿಯ ಸಾವಿನಲ್ಲಿ ಅಂತ್ಯವಾಗಿದ್ದು, ನ್ಯಾಯಕ್ಕಾಗಿ ಮನೆ ಮುಂದೆಯೆ ಕಳೆದ ಎರಡು ದಿನಗಳಿಂದ ಹೆಣವಿಟ್ಟು ಕುಟುಂಬಸ್ಥರು ಧರಣಿ ನಡೆಸಿದ್ದಾರೆ.

ಅಂತ್ಯ ಸಂಸ್ಕಾರವಾಗದೆ ಮನೆ ಮುಂದೆ ಅನಾಥವಾಗಿರೂ ಮೃತದೇಹ. ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ ಅಂತ ಆಕ್ರೋಶ ವ್ಯಕ್ತಪಡಿಸುತ್ತಿರೂ ಕುಟುಂಬಸ್ಥರು.

ಹೌದು, ಇಂತಹ ನೋಡುಗರ ಮನಕಲುಕುವ ದೃಶ್ಯಗಳೆಲ್ಲ ಕಂಡು ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ. ಈ ರೀತಿ ಅನಾಥವಾಗಿ ಅಂತ್ಯ ಸಂಸ್ಕಾರವಾಗದೆ ಹೆಣವಾಗಿ ಮಲಗಿರೋ ಈಕೆ ಹೆಸರು ಸರೋಜಮ್ಮ. ಕಳೆದ 10 ವರ್ಷಗಳಿಂದೆ ಗ್ರಾಮದ ಮಂಜುನಾಥ್ ಎಂಬುವರನ್ನ ವಿವಾಹವಾಗಿದ್ದು, ಇಬ್ಬರು ಮಕ್ಕಳೊಂದಿಗೆ ಸಂಸಾರ ನಡೆಸಿಕೊಂಡಿದ್ರು.

ಆದ್ರೆ ಈ ನಡುವೆ ಒಂದೇ ಕುಟುಂಬದಲ್ಲಿದ್ದ ಮೂವರು ಅಣ್ಣ ತಮ್ಮಂದಿರ ನಡುವೆ ಆಸ್ತಿ ಕಲಹ ಉಂಟಾಗಿದ್ದು, ಮಂಜುನಾಥ್ ಗೆ ಚಿಕ್ಕ ಕೊಠಡಿಯೊಂದನ್ನ ನೀಡಿ ಆಸ್ತಿ ಲಪಟಾಯಿಸಲು ಮುಂದಾಗಿದ್ರಂತೆ. ಹೀಗಾಗಿ ಇದೇ ವಿಚಾರವಾಗಿ ಮನೆಯಲ್ಲಿಜಗಳ ನಡೆಯುತ್ತಿದ್ದು, ಕಳೆದ ಮಂಗಳವಾರ ಸಹ ಮನೆಯಲ್ಲಿ ಮಹಿಳೆಯರ ನಡುವೆ ಜಗಳವಾಗಿದ್ದು, ಮನನೊಂದ ಗೃಹಿಣಿ ಸರೋಜಮ್ಮ ಕಾಳುಮಾತ್ರ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೀಗಾಗಿ ವಿಚಾರ ತಿಳಿದ ಗಂಡ ಪತ್ನಿಯನ್ನ ಆಸ್ವತ್ರೆಗೆ ಕರೆದೋಗಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಮುಂಜಾನೆ ಸರೋಜಮ್ಮ ಕೊನೆಯುಸಿರೆಳಿದಿದ್ದಾಳೆ. ಹೀಗಾಗಿ ನನ್ನ ಮಗಳ ಸಾವಿಗೆ ಮನೆಯಲ್ಲಿದ್ದ ಚಿಕ್ಕಕೆಂಪಯ್ಯ ಸರಸ್ವತಮ್ಮ,ಶಾಂತ ಕುಮಾರ್ ಮತ್ತು ಸುನಿತಾ ಕಾರಣ ಅಂತ ಆರೋಪಿಸಿ ಅಂತ್ಯ ಸಂಸ್ಕಾರ ಮಾಡದೆ ಧರಣಿ ನಡೆಸಿದ್ರು.

ಗೃಹಿಣಿ ಸರೋಜಮ್ಮಳನ್ನ ಕುಟುಂಬಸ್ಥರೆ ಆಸ್ತಿ ಕಲಹದ ವಿಚಾರವಾಗಿ ವಿಷ ಕುಡಿಸಿ ಸಾಯಿಸಿ ಎಸ್ಕೇಪ್ ಆಗಿದ್ದು, ಅವರನ್ನ ಬಂಧಿಸೂವರೆಗೂ ಅಂತ್ಯ ಸಂಸ್ಕಾರ ಮಾಡೋದಿಲ್ಲ ಅಂತ ನೆನ್ನೆಯಿಂದ ಪಟ್ಟು ಹಿಡಿದಿದ್ರು. ಹೀಗಾಗಿ ಮನೆ ಮುಂದೆಯೆ ಎರಡು ದಿನಗಳಿಂದ ಮೃತದೇಹ ಅನಾಥವಾಗಿದ್ದನ್ನ ಕಂಡ ಗ್ರಾಮಸ್ಥರು ಹರಸಾಹಸ ಪಟ್ಟು ಕುಟುಂಬಸ್ಥರ ಮನವೊಲಿಸುವ ಮುಖಾಂತರ ಮದ್ಯಾಹ್ನದ ನಂತರ ಅಂತ್ಯಕ್ರಿಯೆ ನೆರವೇರಿಸಿದ್ರು.

ಎಸ್ಕೇಪ್ ಆಗಿರೂ ಮೃತಳ ಕುಟುಂಬಸ್ಥರ ಸಂಬಂಧೀಕರನ್ನ ಕೇಳಿದ್ರೆ ಗಂಡ ಹೆಂಡತಿ ನಡುವೆ ಯಾವುದೇ ಜಗಳವಿಲ್ಲ, ಮಕ್ಕಳ ವಿಚಾರವಾಗಿ ಮಹಿಳೆಯರ ನಡುವೆ ನಡೆದ ಜಗಳದಿಂದ ಸರೋಜಮ್ಮ ನೊಂದು ಆತ್ಮಹತ್ಯೆಗೆ ಶರಣಾಗಿದ್ದು, ಮನೆಯವರ್ಯಾರು ಕೊಲೆ ಮಾಡಿಲ್ಲ ಅಂತ ಮೃತಳ ಕುಟುಂಬಸ್ಥರ ಆರೋಪವನ್ನ ನಿರಾಕರಿಸಿದ್ದಾರೆ.

ಒಟ್ಟಾರೆ ಚಿಕ್ಕ ಮಕ್ಕಳ ಜೊತೆ ಗಂಡನೊಂದಿಗೆ ಬಾಳಿ ಬೆಳಗಬೇಕಿದ್ದ ಗೃಹಿಣಿ ಅನುಮಾನಾಸ್ಪಾದ ರೀತಿಯಲ್ಲಿ ಸಾವನ್ನಪಿರುವುದು ಕುಟುಂಸ್ಥರನ್ನ ಕೆರಳಿಸಿದೆ. ಇನ್ನೂ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೂ ವಿಜಯಪುರ ಪೋಲೀಸರು ತನಿಖೆ ಮುಂದುವರೆಸಿದ್ದು, ತನಿಖೆಯ ನಂತರವಷ್ಟೆ ಗೃಹಿಣಿಯದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೂದು ಬೆಳಕಿಗೆ ಬರಬೇಕಿದೆ ಎಂದು ತಿಳಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos