ಗಂಡ ಹೆಂಡ್ತಿ ಜಗಳ: ಇಬ್ಬರು ಮಕ್ಕಳು ಬಲಿ

ಗಂಡ ಹೆಂಡ್ತಿ ಜಗಳ: ಇಬ್ಬರು ಮಕ್ಕಳು ಬಲಿ

ಲಕ್ನೋ , ನ. 30 : ಗಂಡ-ಹೆಂಡಿರ ಜಗಳದ ಮದ್ಯೆ ಕೂಸು ಬಡವಾಯಿತು ಅನ್ನೋ ಗಾದೆ ಸತ್ಯ. ಮದ್ಯ ಸೇವಿಸಿ ವ್ಯಕ್ತಿಯೋರ್ವ ಪತ್ನಿ ಜೊತೆ ಜಗಳವಾಡಿದ್ದು, ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಸೂರಜ್ಪುರದಲ್ಲಿ ಘಟನೆ ನಡೆದಿದೆ. ಆರೋಪಿ ಹರಿ ಸೊಳಂಕಿ. 6 ಹಾಗೂ 3 ವರ್ಷದ ಇಬ್ಬರು ಮಕ್ಕಳನ್ನು ಆರೋಪಿ ಕೊಲೆಗೈದಿದ್ದಾನೆ.  ಪೊಲೀಸರು ಬಂಧಿಸಿದ್ದಾರೆ.

ಎಸ್ಪಿ ಸಂಜೀವ್ ಸಿಂಗ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಸೊಳಂಕಿ ತುಂಬಾ ಕುಡಿದು ಜಗಳ ಮಾಡುತ್ತಿದ್ದ ಎಂದು ಆರೋಪಿಯ ಪತ್ನಿ ನಮಗೆ ತಿಳಿಸಿದ್ದಾರೆ ಎಂದು ವಿವರಿಸಿದ್ದಾರೆ. ಘಟನೆ ನಡೆದ ಮರುದಿನ ಬೆಳಗ್ಗೆ ಒಬ್ಬ ಮಗಳ ಮೃತ ದೇಹವು ಮನೆಯಲ್ಲಿ ಪತ್ತೆಯಾಗಿದೆ. ಇನ್ನೊಬ್ಬ ಮಗಳ ದೇಹವು ಪಾಳು ಬಿದ್ದ ಕಟ್ಟಡದಲ್ಲಿ ಪತ್ತೆಯಾಗಿದೆ. ಘಟನೆ ನಂತರ ಆರೋಪಿ ನಾಪತ್ತೆಯಾಗಿದ್ದು, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos