ಚುನಾವಣಾ ಸಮಯದಲ್ಲಿ ಬರ್ತಿದ್ದಾನೆ ಹಂಬಲ್ ಪೊಲಿಟೀಶಿಯನ್

ಚುನಾವಣಾ ಸಮಯದಲ್ಲಿ ಬರ್ತಿದ್ದಾನೆ ಹಂಬಲ್ ಪೊಲಿಟೀಶಿಯನ್

ಬೆಂಗಳೂರು, ಮಾ.28, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಭ್ಯರ್ಥಿಗಳ ಪ್ರಚಾರದ ಭರಾಟೆ ಜೋರಾಗುತ್ತಿದೆ. ಇದರ ನಡುವೆ ಈಗ ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಚುನಾವಣಾ ಕಣಕ್ಕೆ ಧುಮುಕ್ಕುತ್ತಿದ್ದಾರೆ

ಅಚ್ಚರಿ ಪಡಬೇಡಿ ನೋಗರಾಜ್ ರಾಜಕೀಯ ಅಖಾಡಕ್ಕೆ ಇಳಿಯುತ್ತಿರುವುದು ರಿಯಲ್ ಆಗಿ ಅಲ್ಲ ರೀಲ್ ಮೇಲೆ. ಕಳೆದ ವರ್ಷ 2018ರಲ್ಲಿ ರಿಲೀಸ್ ಆಗಿದ್ದ ಡ್ಯಾನೀಶ್ ಸೇಠ್ ಅಭಿನಯದ ‘ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಚಿತ್ರ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಹಾಸ್ಯ ಪ್ರಧಾನವಾದ ಚಿತ್ರವಾಗಿದ್ದರು ಚುನಾವಣೆಯ ಬಗ್ಗೆ ಒಂದೊಳ್ಳೆ ಸಂದೇಶವನ್ನು ನೀಡುವಂತಹ ಚಿತ್ರವಾಗಿತ್ತು.

ಹೌದು, ಕ್ರಿಕೇಟ್ ಆಟಗಾರರ ಜೊತೆ ಸೇರಿ ನಗು ಚಟಾಕಿ ಹಾರಿಸುತ್ತಿದ್ದ ಡ್ಯಾನೀಶ್ ಸಿನಿರಂಗದಲ್ಲೂ ಪೊಲಿಟೀಶಿಯನ್ ನೋಗರಾಜ್ ಆಗಿ ಕಾಮಿಡಿ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಮತ್ತೆ ಡ್ಯಾನೀಶ್ ಪಾರ್ಟ್-2 ಮೂಲಕ ಪೊಲಿಟೀಶಿಯನ್ ನೋಗರಾಜ್ ಆಗಿ ಎಂಟ್ರಿ ಕೊಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ.

ಫ್ರೆಶ್ ನ್ಯೂಸ್

Latest Posts

Featured Videos