ಗರ್ಭಕೋಶದಿಂದ ‘ಬೈಕ್ ಹ್ಯಾಂಡಲ್’ ಹೊರ ತೆಗೆದ ವೈದ್ಯರು!

ಗರ್ಭಕೋಶದಿಂದ ‘ಬೈಕ್ ಹ್ಯಾಂಡಲ್’ ಹೊರ ತೆಗೆದ ವೈದ್ಯರು!

ಮಧ್ಯಪ್ರದೇಶ, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಹಿಳೆಯ ಗರ್ಭಕೋಶದಿಂದ 6 ಇಂಚು ಉದ್ದ ಬೈಕ್ ಹ್ಯಾಂಡಲ್  ಶಸ್ತ್ರ ಚಿಕಿತ್ಯೆ ಮೂಲಕ ಹೊರ ತೆಗೆದ ವಿಚಿತ್ರ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಮಧ್ಯ ಪ್ರದೇಶದ ಭೋಪಾಲ್ ಧಾರ್ ಜಿಲ್ಲೆಯ ಮಹಿಳೆಯ ಗರ್ಭಕೋಶದಲ್ಲಿ 2 ವರ್ಷಗಳಿಂದ ಇದ್ದ 6 ಇಂಚು ಉದ್ದದ ಬೈಕ್  ಹ್ಯಾಂಡಲ್  ವೈದ್ಯರು ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ  ಹೊರ ತೆಗೆದಿದ್ದಾರೆ.

ಬೈಕ್ ಹ್ಯಾಂಡಲ್ ಸೇರಿದ್ದು ಹೇಗೆ? 

2 ವರ್ಷಗಳ ಹಿಂದೆ ಮಕ್ಕಳ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿತ್ತಂತೆ. ಈ ವೇಳೆ, ಗಂಡ ಬೈಕ್  ಹ್ಯಾಂಡಲ್ ಹೆಂಡತಿಯ ಮರ್ಮಾಂಗದಲ್ಲಿ ಬಲವಂತವಾಗಿ ತುರುಕಿದ್ದನಂತೆ. ಮರ್ಯಾದೆಗೆ ಅಂಜಿ, ಮಹಿಳೆಯ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ, ಇತ್ತೀಚೆಗೆ ಮಹಿಳೆಗೆ ತೀವ್ರವಾದ ನೋವು ಕಾಣಿಸಿಕೊಂಡು ಹಿನ್ನಲೆ ಇಲ್ಲಿನ ಚಂದನ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಠಾಣೆಯ ಇನ್ಚಾರ್ಜ್ ರಾಹುಲ್ ಶರ್ಮಾ, ಆಕೆಯನ್ನು ಎಂವೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಹಿಳೆಯ ಪತಿಯನ್ನು ಬಂಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos