ಹುಲಿದಾಳಿಗೆ ರೈತರು ಬಲಿ

  ಹುಲಿದಾಳಿಗೆ ರೈತರು ಬಲಿ

ಚಾಮರಾಜನಗರ, ಅ. 9 : ಚಾಮರಾಜನಗರ ಜಿಲ್ಲೆಯ ಚೌಡಹಳ್ಳಿಯ ರೈತನನ್ನು ಹುಲಿ ಬಲಿಪಡೆದುಕೊಂಡಿದೆ. ಬಂಡೀಪುರ ಅರಣ್ಯದಂಚಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ.  ಜನ, ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿದೆ. ರೈತರು ಹುಲಿ ಬಾಯಿಗೆ ಸಿಕ್ಕಿ ಪ್ರಾಣಬಿಟ್ಟಿದ್ದಾರೆ ಎಂದು  ಗ್ರಾಮಸ್ಥರು  ಹುಲಿ ಕೊಲ್ಲುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಅರಣ್ಯಾಧಿಕಾರಿಗಳು 48 ಗಂಟೆಗಳಲ್ಲಿ ಹುಲಿ ಸೆರೆ ಹಿಡಿಯುವುದಾಗಿ, ಒಂದು ವೇಳೆ ಸಿಗದಿದ್ದರೆ ಗುಂಡಿಕ್ಕಿ ಕೊಲ್ಲುವುದಾಗಿ ಎಪಿಸಿಸಿಎಫ್ ಜಗತ್ ರಾಂ ಭರವಸೆ ನೀಡಿದ್ದರು.
ಅರಣ್ಯಾಧಿಕಾರಿಗಳು ನಿನ್ನೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ 2 ದಿನಗಳಲ್ಲಿ ಹುಲಿ ಹಿಡಿಯುವುದಾಗಿ, ಇಲ್ಲವೇ ಶೂಟ್​ ಓಟ್ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಇನ್ನೂ ಸಹ ಹುಲಿ ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿಲ್ಲ. ಹೀಗಾಗಿ ಹುಲಿ ಹಿಡಿಯಲು ಗಂಭೀರ ಕ್ರಮ ಕೈಗೊಳ್ಳದ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos