ಬಿಗ್ ಬಾಸ್ ಕನ್ನಡ ಫಿನಾಲೆಗೆ ಸಿಕ್ತು ಭರ್ಜರಿ ಟಿ ಆರ್ ಪಿ

ಬಿಗ್ ಬಾಸ್ ಕನ್ನಡ ಫಿನಾಲೆಗೆ ಸಿಕ್ತು ಭರ್ಜರಿ ಟಿ ಆರ್ ಪಿ

ಬೆಂಗಳೂರು: ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಈ ಬಾರಿ ಸೀಸನ್ ಎಲ್ಲಾ ಸೀಸನ್ ಗಳಿಗಿಂತ ವಿಭಿನ್ನ ರೀತಿಯಲ್ಲಿ ಇದ್ದು ಇದರಿಂದ ಎಲ್ಲಾ ಸೀಸನ್ ಗಳಿಗೂ ಹೋಲಿಸಿದರೆ ಈ ಸೀಸನ್ ನಲ್ಲಿ ಹೆಚ್ಚು ಜನಪ್ರಿಯತೆ ಪಡೆಯಿತು ಹಾಗೂ ಹೆಚ್ಚು ಮನರಂಜನೆಯವಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟೀಕೆಗೂ ಸಹ ಕಾರಣವಾಯಿತ್ತು.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಂಡು ಕೆಲವು ವಾರ ಕಳೆದರೂ ಇನ್ನೂ ಆ ಬಗ್ಗೆ ಶುರುವಾಗಿರೋ ಚರ್ಚೆ ನಿಂತಿಲ್ಲ. ಈ ರಿಯಾಲಿಟಿ ಶೋ ಫಿನಾಲೆ ಸಂದರ್ಭದಲ್ಲಿ ಭರ್ಜರಿ ಟಿಆರ್ಪಿ ಪಡೆದುಕೊಂಡಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಇದು ಅತಿ ಹೆಚ್ಚು ಟಿಆರ್ಪಿ ಸಿಕ್ಕ ಫಿನಾಲೆ ಎನ್ನಲಾಗಿದೆ. ಶನಿವಾರ (ಜನವರಿ 27) ಹಾಗೂ ಭಾನುವಾರ (ಜನವರಿ 28) ಎರಡೂ ದಿನ ಉತ್ತಮ ಟಿಆರ್ಪಿ ಸಿಕ್ಕಿದೆ. ಈ ಬಾರಿಯ ಶೋಗೆ ಅಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತ್ತು.

ಶನಿವಾರದ ಎಪಿಸೋಡ್ಗೆ 10.3 ಟಿವಿಆರ್ ಸಿಕ್ಕಿದೆ. ಭಾನುವಾರ 12.6 ಟಿವಿಆರ್ ಸಿಕ್ಕಿದೆ. ಎರಡೂ ದಿನಗಳ ಟಿಆರ್ಪಿ ಸರಾಸರಿ ತೆಗೆದಾಗ 11.4 ಟಿವಿಆರ್ ಆಗಲಿದೆ. ಈ ಮೂಲಕ ಒಳ್ಳೆಯ ಟಿಆರ್ಪಿಯೊಂದಿಗೆ ಬಿಗ್ ಬಾಸ್ ಕೊನೆಗೊಂಡಂತೆ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos