ಉಪ್ಪಾರ ನೌಕರರ ಬೃಹತ್ ಸಮಾವೇಶ

ಉಪ್ಪಾರ ನೌಕರರ ಬೃಹತ್ ಸಮಾವೇಶ

 ಬೆಂಗಳೂರು, ಡಿ. 11: ಉಪ್ಪಾರ ನೌಕರರ ವೃತ್ತಿಪರ ಮತ್ತು ಮಹಿಳೆಯರ ಬೃಹತ್  ಸಮಾವೇಶವನ್ನ ಡಿ.15 ರಂದು ಶಿಕ್ಷಕರ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಎಂ ಲಾತೂರ್ ತಿಳಿಸಿದ್ದಾರೆ .

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಸ್ .ಎಸ್.ಎಲ್.ಸಿ.ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 8೦ ಕ್ಕೂ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಹಾಗೂ ಸಾಧಕರಿಗೆ ಹಿರಿಯರಿಗೆ ಗೌರವ ಸಮರ್ಪಣಾ ವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಸಮಾಜದವರು ರಾಜ್ಯದಲ್ಲಿ 35 ರಿಂದ 4೦ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಆರ್ಥಿಕವಾಗಿ , ಸಾಮಾಜಿಕವಾಗಿ , ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಸಮಾನ ಮತ್ತು ಸರಿಯಾದ ನ್ಯಾಯ ಸಿಗದೆ ಹಿಂದುಳಿದಿದ್ದೇವೆ ಅದರಿಂದ ನಮ್ಮ ಸಮಾಜದ ಸರ್ವತೋಮುಖ ಬೆಳವಣಿಗೆಗಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಮಾವೇಶದಲ್ಲಿ ನಮ್ಮ ಸಮಾಜಸ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ರನ್ನ ನೇಮಿಸಬೇಕು, 1೦೦ ಕೋಟಿ ಅನುಧಾನ ನೀಡಬೇಕು ,ನೌಕರರಿಗೆ ಆಗುತ್ತಿರುವ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಲಾಗುವುದಾಗಿ ತಿಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ,ಶಾಸಕ ಪುಟ್ಟರಂಗಶೇಟ್ಟಿ ಸೇರಿದಂತೆ ಹಲವರು ರಾಜಕೀಯ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos