ಕಣ್ಣು ಬಿಟ್ಟಳಾ ಹುಬ್ಬಳ್ಳಿ ನಲ್ಲಮ್ಮ ದೇವಿ?

ಕಣ್ಣು ಬಿಟ್ಟಳಾ ಹುಬ್ಬಳ್ಳಿ ನಲ್ಲಮ್ಮ ದೇವಿ?

ಹುಬ್ಬಳ್ಳಿ, ಆ. 28 : ಜನ ಮರುಳೋ ಜಾತ್ರ ಮರುಳೋ ಎಂಬಂತೆ ಅಬ್ಬಬ್ಬಾ.. ಹುಬ್ಬಳ್ಳಿ ನಗರದ ನಲ್ಲಮ್ಮ ದೇವಿ ಕಣ್ಣು ಬಿಟ್ಟಳಂತೆ! ರಾತ್ರೋರಾತ್ರಿ ದೇವತೆ ಕಣ್ಣು ಬಿಟ್ಟಿದ್ದಾಳೆಂದು ಸುದ್ದಿ ಹಬ್ಬಿದೆ. ಅಬ್ಬಬ್ಬಾ.. ರಾತ್ರೋರಾತ್ರಿ ದೇವತೆ ಕಣ್ಣು ಬಿಟ್ಟಿದ್ದಾಳೆಂದು ಸುದ್ದಿ ಹಬ್ಬಿಸಿದ ಜನ. ಓಡೋಡಿ ಬಂದ ಪೊಲೀಸರಿಗೆ ಗೊತ್ತಾಯ್ತು ದೇವಿ ಕಣ್ಣೀನ ಪವಾಡ. ದೇವಿಯನ್ನು ಉಳಿಸಿಕೊಳ್ಳಲಲು ಜನರು ಮಾಡಿಎ ಹೈ ಡ್ರಾಮ!
ರೈಲ್ವೆ ಇಲಾಖೆಯ ಜಾಗದಲ್ಲಿದೆ ನಲ್ಲಮ್ಮ ದೇವಸ್ಥಾನ ದೇವಸ್ಥಾನ ತೆರವು ಮಾಡಲು ರೈಲ್ವೆ ಇಲಾಖೆ ಮುಂದಾಗಿತ್ತು.ಅಧಿಕಾರಿಗಳನ್ನ ದಿಕ್ಕು ತಪ್ಪಿಸಲು ದೇವಿಗೆ ಕೃತಕ ಕಣ್ಣು ಕೊಟ್ಟ ಟ್ರಸ್ಟಿಗಳು..! ದೇವರ ಹೆಸರಿನಲ್ಲಿ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಹುಬ್ಬಳ್ಳಿ ರೇಲ್ವೆ ನಿಲ್ದಾಣದ ಬಳಿ ಇರುವ ರಾಮ ಮಂದಿರದ ಪಕ್ಕದಲ್ಲಿರುವ ನಲ್ಲನಮ್ಮ ದೇವಿ ಕಣ್ಣು ಬಿಟ್ಟಿದ್ದಾಳೆ. ವಿಚಾರ ತಿಳಿಯುತ್ತಿದ್ದಂತೆ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos