ಹೃತಿಕ್- ದೀಪಿಕಾ ಮೇಲೆ ಗರಂ..!

ಹೃತಿಕ್- ದೀಪಿಕಾ ಮೇಲೆ ಗರಂ..!

ಮುಂಬೈ, ಡಿ. 19 : ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ದೀಪಿಕಾ ಪಡುಕೋಣೆ ಪಾರ್ಟಿ ಮಾಡಿರೋ ವೀಡಿಯೋವೊಂದು ಸಖತ್ ಸೌಂಡ್ ಮಾಡ್ತಿದ್ದು, ನೆಟ್ಟಿಗರ ಕೆಂಗಣ್ಣಿಗೂ ಕಾರಣವಾಗಿದೆ.
ಇತ್ತಿಚೆಗೆ ಮುಂಬೈನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳು ಪಾರ್ಟಿ ಮಾಡಿದ್ರು. ಪಾರ್ಟಿಲಿ ಹೃತಿಕ್- ದೀಪಿಕಾ ಕೇಕ್ ತಿನ್ನುತ್ತಿರುವ ವೀಡಿಯೋ ವೈರಲ್ಲಾಗಿತ್ತು. ವಿವಾದಾತ್ಮಕ ಪೌರತ್ವ ನಿಷೇಧ ಕಾಯ್ದೆಯಿಂದ ದೇಶವೇ ಹೊತ್ತಿ ಉರಿಯುತ್ತಿದೆ, ನೀವು ಪಾರ್ಟಿ ಮಾಡ್ತಿದ್ಧಾರೆ ಅಂತ ಗರಂ ಆಗಿದ್ದಾರೆ. ಶೇಮ್ ಆನ್ ಯು ಹೃತಿಕ್ ದೀಪಿಕಾ ಅನ್ನೋ ಹ್ಯಾಷ್ಟ್ಯಾಗ್ ಟ್ರೆಂಡ್ ಆಗಿದೆ.
ಪೌರತ್ವ ನಿಷೇಧ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿರುವ ಕೆಲವು ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಹಿಂಸಾಚಾರ ನಡೆದಿದೆ. ಇದರಿಂದ ಭಾರತದ ಮೂಲೆ ಮೂಲೆಯಲ್ಲೂ ಕೆಲವು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಅತ್ತ ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ದೀಪಿಕಾ ಪಡುಕೋಣೆ ಡಾರ್ಕ್ ಚಾಕಲೇಟ್ ಕೇಕ್ ತಿಂದು ಪಾರ್ಟಿ ಮಾಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos