ಉಸಿರಾಟಕ್ಕೆ ಎಷ್ಟು ಬೇಕೋ‌ ಅಷ್ಟು ಕೊಟ್ಟಿದ್ದಾರೆ: ಎಸ್.ಆರ್.ವಿಶ್ವನಾಥ್

ಉಸಿರಾಟಕ್ಕೆ ಎಷ್ಟು ಬೇಕೋ‌ ಅಷ್ಟು ಕೊಟ್ಟಿದ್ದಾರೆ: ಎಸ್.ಆರ್.ವಿಶ್ವನಾಥ್

ಬೆಂಗಳೂರು, ಅ. 5: ಕೇಂದ್ರ ನೆರೆ ಪರಿಹಾರ ಬಿಡುಗಡೆಯಾಗಿರುವುದು ಒಂದು ಆಶಾಕಿರಣವಾಗಿದೆ. ಈ‌ ಮುಂಚೆ ಸಾಕಷ್ಟು ಟೀಕೆ ಟಿಪ್ಪಣಿ ವ್ಯಕ್ತವಾಗಿತ್ತು. ಇಂದು ನಮ್ಮ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಾಗಿದೆ. ಪ್ರಧಾನಿ ಮೋದಿ ಒರಿಸ್ಸಾ, ಬಿಹಾರ ಪ್ರವಾಹ ಸಂಬಂಧ ಟ್ವೀಟ್ ಮಾಡಿರುವುದಕ್ಕೆ ಟೀಕೆ ವ್ಯಕ್ತವಾಗಿತ್ತು.

ಇದು ಮೊದಲ ಕಂತಾಗಿದೆ. ರಾಜ್ಯದ ಜನತೆ ಹಾಗು ಸಿಎಂ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಉಸಿರಾಡುವುದಕ್ಕೆ ಎಷ್ಟು ಬೇಕೋ ಅಷ್ಟು ಸದ್ಯ ಕೊಟ್ಟಿದ್ದಾರೆ. ಮತ್ತೆ ಹೆಚ್ಚಿನ ಅನುದಾನ ಬರುತ್ತದೆ. ಪ್ರಧಾನಿ ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡಿಲ್ಲ

ನೆರೆ ಭಾಗದಲ್ಲಿ ಸಚಿವರು, ಶಾಸಕರು ವಾಸ್ತವ್ಯ ಮಾಡಲಿ

ನೆರೆ ಭಾಗದ ಶಾಲೆ, ಕಲ್ಯಾಣ ಮಂಟಪದಲ್ಲಿ ಹಾಗೂ ಇತರೆ ಕಡೆ ಉಳಿದುಕೊಂಡಿದ್ದಾರೋ ಅಂತಹ ಸ್ಥಳಗಳಲ್ಲಿ ಸಚಿವರು, ಉಸ್ತುವಾರಿ ಸಚಿವರು, ಶಾಸಕರು ಒಂದೆರಡು ದಿನ ವಾಸ್ತವ್ಯ ಮಾಡಲಿ ಅದರಿಂದ ಅಲ್ಲಿನ‌ ಸಮಸ್ಯೆ ಏನಿದೆ‌ ಎಂದು‌ ಅರಿತು ಬಂದಿರುವ ಪರಿಹಾರ ಸದ್ಬಳಕೆ ಮಾಡಬಹುದಾಗಿದೆ.

ಸಂತ್ರಸ್ತರ ಸಂಕಷ್ಟ ಏನಿದೆ‌ ಎಂದು ಗೊತ್ತಾಗುತ್ತದೆ. ಈ‌ ಮನವಿಯನ್ನು ಸಿಎಂ ಕಡೆಯಿಂದ ಮಾಡುತ್ತೇನೆ. ಆ ಅಭಾಗದ ಶಾಸಕರು ಸಂತ್ರಸ್ತರ ಜತೆ ವಾಸ್ತವ್ಯ ಮಾಡುವುದು ಒಳ್ಳೆಯದು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos