ಡಿಕೆಶಿ ಪುತ್ರಿ ಆಸ್ತಿ ಎಷ್ಟು ಗೊತ್ತಾ?

ಡಿಕೆಶಿ ಪುತ್ರಿ ಆಸ್ತಿ ಎಷ್ಟು ಗೊತ್ತಾ?

ಬೆಂಗಳೂರು, ಸೆ. 11: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಗೆ ಇಡಿ ಶಾಕ್ ನೀಡಿದ್ದು, ಸೆ. 12 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿಯಿಂದ ಸಮನ್ಸ್ ಜಾರಿ ಮಾಡಲಾಗಿದ್ದು, ಇದೀಗ ಐಶ್ವರ್ಯ ಅವರ ಹೆಸರಿನಲ್ಲಿರುವ ಆಸ್ತಿ ಬಹಿರಂಗವಾಗಿದೆ.

ಐಶ್ವರ್ಯ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ನ ಟ್ರಸ್ಟಿ ನಲ್ಲಿ ಹೂಡಿಕೆ ಇದೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ 24 ಕೋಟಿ ಮೌಲ್ಯದ ಜಾಗ ಐಶ್ವರ್ಯ ಹೆಸರಿನಲ್ಲಿ ರಿಜಿಸ್ಟರ್ ಆಗಿರುವುದು ಇದೆ. ಮುಂಬೈನಲ್ಲಿ 1.2 ಕೋಟಿ ರೂ. ಮೌಲ್ಯದ ಐಷಾರಾಮಿ ಫ್ಲಾಟ್ ಇವರ ಹೆಸರಿಗೆ ಇದೆ. ಸೋಲ್ ಸ್ಪೇಸ್ ಪ್ರಾಜೆಕ್ಷ್ಟ್ ಲಿ. ನವರಿಗೆ 76.11 ಕೋಟಿ ರೂ. ಸಾಲ ಕೊಟ್ಟಿದ್ದಾರೆ. ಒಟ್ಟು 81.92 ಕೋಟಿ ರೂ.ಲ ಸಾಲ ಐಶ್ವರ್ಯ ಹೆಸರಿನಲ್ಲಿದೆ. ಐಶ್ವರ್ಯ ಹೆಸರಿನಲ್ಲಿ ಘೋಷಿತ ಆಸ್ತಿಯೇ 108 ಕೋಟಿ ರೂ. ಇದೆ.

2018 ರ ಚುನಾವಣೆ ವೇಳೆ ಐಶ್ವರ್ಯ ಆಸ್ತಿ ಘೋಷಣೆ ಮಾಡಲಾಗಿತ್ತು. ಐಶ್ವರ್ಯ ಹೆಸರಿನಲ್ಲಿ 102 ಕೋಟಿ ಮೌಲ್ಯದ 102 ಕೋಟಿ. ಚರಾಸ್ತಿ 5.17 ಕೋಟಿ ಇರುವುದಾಗಿ ಘೋಷಣೆ ಮಾಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos