ಬಿಸಿಯೂಟ ಬಡಿಸಿದ ಸಚಿವ ಸುರೇಶ್

ಬಿಸಿಯೂಟ ಬಡಿಸಿದ ಸಚಿವ ಸುರೇಶ್

ಶಿರಸಿ, ಡಿ. 11 : ತಾಲೂಕಿನ ನೆಗ್ಗು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅಚ್ಚರಿಯೋ ಅಚ್ಚರಿ. ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್ ಶಾಲೆಗೆ ಬಂದು ಮಕ್ಕಳಿಗೆ ಬಿಸಿಯೂಟದ ಸಾಂಬಾರು ಬಡಿಸಿದರು. ಸ್ವಚ್ಛತೆ, ಶಿಕ್ಷ ಣ ಕಲಿಕೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ತಾಲೂಕಿನ ನೆಗ್ಗು ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುಧಿರೇಶ್ ಕುಮಾರ್ ಭೇಟಿ ನೀಡಿದ್ದರು. ಗೋಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವರು ಸ್ಥಳೀಯ ಶಾಲೆಗೂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟದ ಸಾಂಬಾರು
ಬಡಿಸಿ ಗಮನಸೆಳೆದರು. ಈ ವೇಳೆ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು ಯಾವುದಾದರೂ ತೊಂದರೆ ಇದೇಯಾ? ಎಂದು ಪ್ರಶ್ನಿಸಿದರು.

ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ ಸಚಿವರು ಜೀವನದಲ್ಲಿ ಸ್ವಚ್ಛತೆ ಇಲ್ಲದಿದ್ದರೆ ಆಗುವ ದುಷ್ಪರಿಣಾಮ ಬಗ್ಗೆ ಗಮನಸೆಳೆದರು. ನಿತ್ಯ ಬಿಸಿಯೂಟ ಹೇಗಿರುತ್ತದೆ? ಏನೇನು ನೀಡಲಾಗುತ್ತಿದೆ? ಏನಾದರೂ ಸಮಸ್ಯೆ ಇದೆಯಾ ಎಂದು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಕೆಲ ಹೊತ್ತು ಶಾಲೆಯಲ್ಲಿ ಕಳೆದು ತೆರಳಿದರು.

ಯಾವುದೇ ವೈದ್ಯರ ಬಳಿ ಹೋದರು ಚೆನ್ನಾಗಿ ನೀರು ಕುಡಿಯಬೇಕು ಎಂಬ ಸಲಹೆ ಕೊಡುತ್ತಾರೆ. ಆದರೆ ದೈನಂದಿನ ಚಟುವಟಿಕೆ ನಡುವೆ ಸರಿಯಾಗಿ ನೀರು ಕುಡಿಯಲು ಸಾಧ್ಯವಾಗುವುದೇ ಇಲ್ಲ. ಎಷ್ಟೋ ಬಾರಿ ಬಾಯಾರಿಕೆಯಾದರೂ ಕೆಲಸ ನಡುವೆ ನೀರು ಕುಡಿಯದೆ ದಿನ ಕಳೆದು ಬಿಡುವುದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನೀರು ಕುಡಿಯಲು ನೆನಪಿಸಲು ರಾಜ್ಯ ಸರಕಾರ ಕೇರಳದ ‘ವಾಟರ್ ಬೆಲ್’ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos