ಬಿಸಿ ಬಿಸಿ ಚಪಾತಿ ತಿನ್ನಲು ಗಿಣಿ ಮಾಡಿದ್ದೇನು?

ಬಿಸಿ ಬಿಸಿ ಚಪಾತಿ ತಿನ್ನಲು ಗಿಣಿ ಮಾಡಿದ್ದೇನು?

ಮುಂಬೈ, ಏ. 13 : ಲಾಕ್ ಡೌನ್ ನಿಂದಾಗಿ ಜನರೆಲ್ಲ ಮನೆಯಲ್ಲೆ ಇರುವಂತಾಗಿ ಹಲವಾರು ಪ್ರಾಣಿ ಪಕ್ಷಿಗಳು ಸಹ ತಮ್ಮ ಆಹಾರಕ್ಕಾಗಿ ಪರದಾಡುವಂತಾಗಿದೆ. ಹಲವಾರು ಜನರು ಸ್ವಯಂ ಪ್ರೇರಣೆಯಿಂದ ಬೀದಿ ನಾಯಿ, ಹಸುಗಳಿಗೆ ಆಹಾರ ನೀಡುತ್ತಿದ್ದಾರೆ.
ಇಲ್ಲೊಂದು ಗಿಳಿಗೆ ರೋಟಿಯೆ ಬೇಕೆಂದು ಅಡುಗೆ ಮನೆಯಲ್ಲಿ ಕಾದು ಕುಳಿತ ವಿಡಿಯೋ ವೈರಲ್ ಆಗಿದೆ. ಮನೆಯೊಡತಿ ರೋಟಿ ಮಾಡುತ್ತಿರುವಾಗ ಹತ್ತಿರ ಹಾರಿ ಬರುವ ಗಿಳಿಯನ್ನು ತಡೆದ ಅವರು ‘ಪಾತ್ರೆಗಳು ಬಿಸಿ ಇವೆ, ಸ್ವಲ್ಪ ತಡೆ’ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳುತ್ತದೆ. ಆದರೂ ಗಿಳಿ ರೋಟಿಗಾಗಿ ಗಡಿಬಿಡಿ ಮಾಡುವುದು ನೋಡಲು ಮುದ್ದಾಗಿದೆ. ಬಿಸಿ ಬಿಸಿ ಚಪಾತಿಯನ್ನು ತಿನ್ನಿಸಿ ಮನೆಯವರು ಖುಷಿ ಪಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos