ಮಕ್ಕಳ ಮೇಲೆ  ಬಿಸಿ ಸಾರು!

ಮಕ್ಕಳ ಮೇಲೆ  ಬಿಸಿ ಸಾರು!

ಬೆಳಗಾವಿ, ಡಿ. 11: ಅಂಗನವಾಡಿಯಲ್ಲಿ ಮಧ್ಯಾಹ್ನ ಊಟ ಬಡಿಸುವಾಗ ಮಕ್ಕಳ ಮೇಲೆ  ಬಿಸಿ ಸಾರು ಚೆಲ್ಲಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದ ಗೋಳಿಯಳ್ಳಿ ಅಂಗನವಾಡಿಯಲ್ಲಿ ನಡೆದಿದೆ.

3 ಹೆಣ್ಮಕ್ಕಳು, ಆಯಾ ಸುಟ್ಟ ಗಾಯಗಳಿಂದ ಗಂಭೀರಗೊಂಡಿದ್ದಾರೆ.  ಮಕ್ಕಳಿಗೆ ಊಟ ಬಡಿಸುವಾಗ ಘಟನೆ ನಡೆದಿದೆ. ಸಂಜನಾ, ಸಾನ್ವಿ, ಸಮೀಕ್ಷಾ ಗಂಭೀರ ಗಾಯಗೊಂಡಿರುವ ಮಕ್ಕಳು. ಎಲ್ಲರೂ 5 ವರ್ಷದ ಮಕ್ಕಳು ಎಂದು ತಿಳಿದು ಬಂದಿದೆ. “ವೃದ್ಧೆಯನ್ನು ಅಂಗನವಾಡಿ ಸಹಾಯಕಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.  ಸಾಂಬಾರ ತುಂಬಿದ ಪಾತ್ರೆ ತರುವಾಗ ಕೈ ಜಾರಿ ಬಿದ್ದಿದೆ. ಹೀಗಾಗಿ ಆಯಾ, ಮೂವರು ಮಕ್ಕಳಿಗೆ ಗಂಭೀರ ಗಾಯವಾಗಿದೆ.  ಗಾಯಾಳು ಮಕ್ಕಳನ್ನು ಐಸಿಯುಗೆ ಸ್ಥಳಾಂತರಿಸುವದಾಗಿ ವೈದ್ಯರು ಹೇಳಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ,” ಗಾಯಾಳು ಬಾಲಕಿ ತಾಯಿ ಆಗ್ರಹ ಮಾಡಿದ್ದಾರೆ.

ಮಕ್ಕಳಿಗೆ ಗಂಭೀರ ಗಾಯ ಹಿನ್ನೆಲೆ ಕೆಎಲ್ಇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  55 ವರ್ಷದ ಆಯಾ ಲೀಲಾವತಿಗೆ ಮುಖ, ಕೈ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos