ಹಾಸ್ಟೆಲ್ , ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆ ಇಡೇರಿಕೆಗಾಗಿ ಸುವರ್ಣಸೌಧದ ಮುಂದೆ ಧರಣಿ

  • In State
  • December 21, 2018
  • 344 Views
ಹಾಸ್ಟೆಲ್ , ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆ ಇಡೇರಿಕೆಗಾಗಿ ಸುವರ್ಣಸೌಧದ ಮುಂದೆ ಧರಣಿ

ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಹಲವು ಬೇಡಿಕೆಗಳನ್ನು ಈಡೇರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಸುವರ್ಣ ವಿಧಾನ ಸೌಧ ಎದುರು ಸುವರ್ಣ ಗಾರ್ಡನ್ ಟೆಂಟ್  ನಲ್ಲಿ ಸಾಮೂಹಿಕ ಧರಣಿ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಮಂತ್ರಿ  ಹೆಚ್.ಡಿ.ಕುಮಾರಸ್ವಾಮಿ ಮತ್ತು  ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಬೇಡಿಕೆ ಪತ್ರದಲ್ಲಿ 3312 ಜನ ಹಾಸ್ಟೆಲ್ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಆದೇಶ ರದ್ದಾಗಬೇಕು. ನಿವೃತ್ತಿಯವರೆಗೂ ಸೇವಾ ಭದ್ರತೆ ಕೊಡಬೇಕು. ಮತ್ತು ಕಾಯಂ ಮಾಡಲು ಒತ್ತಾಯಿಸಿ

ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಥಾಸ್ಥಿತಿ ಆದೇಶ ಜಾರಿ ಮಾಡದೇ ಕೆಲಸದಿಂದ ತೆಗೆದು ಹಾಕಿರುವ ನೌಕರರನ್ನು ಮತ್ತೆ ನೇಮಕ ಮಾಡಿ ಕೊಳ್ಳಬೇಕು. ಬಾಕಿ ಇರುವ ಸಂಬಳ ತಕ್ಷಣ ಕೊಡಬೇಕು. ESI ಮತ್ತು PF ಹಾಗೂ ಕಾರ್ಮಿಕ ಕಾನೂನು ಗಳ ಜಾರಿ ಮಾಡಬೇಕು ಎಂಬ ಬೇಡಿಕೆಗಳು ಸೇರಿದಂತೆ ಅನೇಕ ಬೇಡಿಕೆಗಳ ಇಡೇರಿಸಲು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಮುಖಂಡ ಹನುಮೇಗೌಡ ಸೇರಿದಂತೆ ಅನೇಕ ಮುಖಂಡರು ಹಾಗೂ ನೂರಾರು ನೌಕರರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos