‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಈಗ ಒಟಿಟಿಗೆ

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಈಗ ಒಟಿಟಿಗೆ

ಬೆಂಗಳೂರು: ನಮ್ಮ ಸ್ಯಾಂಡಲ್ ನಲ್ಲಿ ಹಲವಾರು ಸಿನಿಮಾಗಳು ರಿಲೀಸ್ ಆಗುತ್ತದೆ ಅದೇ ತರಹ ಸಿನಿಮಾ ಹಾಸ್ಟೆಲ್ ಹುಡುಗ ಬೇಕಾಗಿದ್ದಾರೆ ಈ ಸಿನಿಮಾ ಅತ್ಯಂತ ಹೆಚ್ಚು ಜನಪ್ರಿಯಗೊಂಡಿದೆ ಹಾಗೂ ಈ ಸಿನಿಮಾವನ್ನು ನೋಡಿದ ಎಲ್ಲಾ ಪ್ರೇಕ್ಷಕರು ತುಂಬಾ ಚೆನ್ನಾಗಿದೆ ಎಂಬ ಮಾತುಗಳ ನಾಡಿದ್ದರು.
2023ರಲ್ಲಿ ಗೆಲುವು ಕಂಡ ಕನ್ನಡ ಸಿನಿಮಾಗಳಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೂಡ ಸದ್ದು ಮಾಡಿದೆ. ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಭರಪೂರ ನಗಿಸಿದ ಈ ಸಿನಿಮಾ 50 ದಿನಗಳನ್ನು ಪೂರೈಸಿದೆ. ಈಗ ಈ ಚಿತ್ರ ಒಟಿಟಿ ಅಂಗಳಕ್ಕೆ ಎಂಟ್ರಿ ನೀಡಿದೆ. ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿದ ಈ ಸೂಪರ್ ಹಿಟ್ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ‘ಜೀ 5’ ಸಂಸ್ಥೆಯ ಪಾಲಾಗಿದೆ. ಥಿಯೇಟರ್ನಲ್ಲಿ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಈಗ ಒಟಿಟಿ ಪ್ಲಾಟ್ಫಾರ್ಮ್ನಲ್ಲೂ ಗಮನ ಸೆಳೆಯುತ್ತಿದೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಕಥೆ ಸಖತ್ ಭಿನ್ನವಾಗಿದೆ. ಈ ಸಿನಿಮಾದ ಗೆಲುವಿಗೆ ಇದು ಮುಖ್ಯ ಕಾರಣ. ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರು ಆ್ಯಕ್ಷನ್-ಕಟ್ ಹೇಳಿದ ಮೊದಲ ಸಿನಿಮಾ ಇದು. ಚೊಚ್ಚಲ ಪ್ರಯತ್ನದಲ್ಲೇ ಅವರಿಗೆ ಗೆಲುವು ಸಿಕ್ಕಿದೆ. ಈ ಸಿನಿಮಾಗೆ ಆರಂಭದ ದಿನಗಳಲ್ಲೇ ಪುನೀತ್ ರಾಜ್ಕುಮಾರ್ ಅವರಿಂದ ಬೆಂಬಲ ಸಿಕ್ಕಿತ್ತು. ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿಕೊಡುವ ಮೂಲಕ ಅವರ ಹೊಸಬರ ಬೆನ್ನು ತಟ್ಟಿದ್ದರು. ಅಪ್ಪು ಮತ್ತು ಪ್ರೇಕ್ಷಕರ ಆಶೀರ್ವಾದದಿಂದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಯಶಸ್ಸು ಕಂಡಿತು. ಅನೇಕ ಸ್ಟಾರ್ ಕಲಾವಿದರು ಈ ಚಿತ್ರತಂಡಕ್ಕೆ ಸಪೋರ್ಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos