ಆಸ್ಪತ್ರೆಯಲ್ಲೇ ಚಿಕಿತ್ಯೆ ನೀಡುತ್ತಿರುವ ಮಾಂತ್ರಿಕ

ಆಸ್ಪತ್ರೆಯಲ್ಲೇ ಚಿಕಿತ್ಯೆ ನೀಡುತ್ತಿರುವ ಮಾಂತ್ರಿಕ

ಭೋಪಾಲ್, ಜು. 17 :  ಹಾವು ಕಚ್ಚಿ ಆಸ್ಪತ್ರೆಗೆ ಮಹಿಳೆಯೊಬ್ಬರು ದಾಖಲಾಗಿದ್ದು, ಆಕೆಯ ಪತಿ ವಾರ್ಡಿನಲ್ಲೇ ಮಾಂತ್ರಿಕನಿಂದ ಚಿಕಿತ್ಸೆ ಕೊಡಿಸಿದ ಘಟನೆ ಮಧ್ಯಪ್ರದೇಶದ ದಾಮೋದಲ್ಲಿ ನಡೆದಿದೆ.
ಇರ್ಮತಿ ದೇವಿ (25) ಆಸ್ಪತ್ರೆಗೆ ದಾಖಲಾದ ಮಹಿಳೆ. ಹಾವು ಕಚ್ಚಿದ್ದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮಹಿಳೆ ಆಸ್ಪತ್ರೆಗೆ ದಾಖಲಾದ ದಿನವೇ ಅದೇ ರಾತ್ರಿ ಪತಿ ಹಾಗೂ ಆಕೆಯ ಸಂಬಂಧಿಕರು ವಾರ್ಡಿಗೆ ಮಾಂತ್ರಿಕನನ್ನು ಕರೆ ತಂದಿದ್ದಾರೆ. ವಾರ್ಡಿನಲ್ಲಿ ಮಾಂತ್ರಿಕ ಇರುವುದನ್ನು ನರ್ಸ್ ಗಮನಿಸಿದರೂ ಸಹ ಆಕೆ ಅವರನ್ನು ತಡೆಯಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಮಾಂತ್ರಿಕ ವಾರ್ಡಿಗೆ ಬಂದು ಪೂಜೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ವಿಡಿಯೋ ನೋಡಿ ಆಸ್ಪತ್ರೆ ಸಿಬ್ಬಂದಿ ದಂಗಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos