ಹೊಸಕೋಟೆ ಕೆರೆಗೆ ರಾಜಹಂಸ ಅತಿಥಿ

  • In Tourism
  • September 20, 2019
  • 388 Views
ಹೊಸಕೋಟೆ ಕೆರೆಗೆ ರಾಜಹಂಸ ಅತಿಥಿ

ಹೊಸಕೋಟೆ, ಸೆ. 20: ಐತಿಹಾಸಿಕ ಹಿನ್ನೆಲೆಯುಳ್ಳ ಹೊಸಕೋಟೆ ದೊಡ್ಡಕೆರೆ ಬಳಿ ದಿಢೀರ್ ಅತಿಥಿಗಳಾಗಿ ಕಾಣಿಸಿಕೊಂಡ ರಾಜಹಂಸಗಳು (ಫ್ಲೆಮಿಂಗೋ ಪಕ್ಷಿ ಸಂಕುಲ) ಪಕ್ಷಿ ಪ್ರಿಯರಲ್ಲಿ ಸಂತಸ ಮೂಡಿಸಿವೆ.

ನೂರಾರು ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿ ವಿಶೇಷ ಅತಿಥಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. 20ಕ್ಕೂ ಹೆಚ್ಚು ಪಕ್ಷಿಗಳು ಕೆರೆ ಅಂಗಳದಲ್ಲಿ ವಿಹರಿಸುತ್ತಿದ್ದು, ನೋಡುಗರ ಗಮನ ಸೆಳೆಯುತ್ತಿವೆ.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿರುವ ದೊಡ್ಡ ಅಮಾನಿಕೆರೆಗೆ ಇದೇ ಮೊದಲ ಬಾರಿಗೆ ರಾಜಹಂಸ ಪಕ್ಷಿಗಳು ಆಗಮಿಸಿರುವುದು ವಿಶೇಷ. ಪಕ್ಷಿ ಪ್ರಿಯರು ರಾಜಹಂಸಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಸಂಭ್ರಮಿಸಿದರು. ಎಚ್ಪಿ ಸಂಸ್ಥೆಯ ಟೆಕ್ಕಿ ನೊವೆಲ್ ಕುಮಾರ್ ಎಂಬುವರು ಪಕ್ಷಿ ಪ್ರಿಯರಾಗಿದ್ದು, ಬಿಡುವಿನ ಸಮಯದಲ್ಲಿ ಹೊಸಕೋಟೆ ಕೆರೆ ಭಾಗದಲ್ಲಿ ಪಕ್ಷಿಗಳ ಫೋಟೋ ಸೆರೆ ಹಿಡಿಯುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಸೆ. 19ರ ಮುಂಜಾನೆ ಪಕ್ಷಿಗಳ ಅರಸಿ ಹೊರಟವರ ಕ್ಯಾಮರಾ ಕಣ್ಣಿಗೆ ರಾಜಹಂಸ ಪಕ್ಷಿಗಳು ಗೋಚರಿಸಿವೆ.

ವಿಶೇಷತೆ: ಈ ಪಕ್ಷಿಗಳು ಶಾಂತ ವಾತಾವರಣ ಇಷ್ಟಪಡುತ್ತವೆ, ಸುಮಾರು 2 ಮೀಟರ್ ಎತ್ತರವಿದ್ದು ನೋಡಲು ಆಕರ್ಷಕವಾಗಿರುತ್ತವೆ. ಇವುಗಳ ಕೊಕ್ಕು ದಪ್ಪದಾಗಿದ್ದು, ಮೀನುಗಳನ್ನು ವೇಗವಾಗಿ ಬೇಟೆಯಾಡುವ ಸಾಮರ್ಥ್ಯ ಹೊಂದಿದ್ದು, ಇವುಗಳ ಗ್ರಹಣ ಶಕ್ತಿಯೂ ಚುರುಕಾಗಿದೆ. ಬಹು ಎತ್ತರದ ಪಕ್ಷಿಗಳಾಗಿದ್ದು, ಕುತ್ತಿಗೆಯನ್ನು ನೀರಿನ ಆಳಕ್ಕೆ ಹಾಕಿ ಮೀನು ಹಿಡಿಯುವ ದೃಶ್ಯ ರಮಣೀಯ. ರೆಕ್ಕೆ ಬಿಚ್ಚಿದಾಗ ಗೋಚರಿಸುವ ಕೆಂಗುಲಾಬಿ ಬಣ್ಣ ಮನೋಹರವಾಗಿರುತ್ತದೆ. ಒಮ್ಮೆಗೆ ಪಕ್ಷಿಗಳು ಗರಿ ಬಿಚ್ಚಿ ಹಾರಿದಾಗ ಗುಲಾಬಿ ವರ್ಣದ ಸೌಂದರ್ಯ ಮೋಹಕವಾಗಿರುತ್ತದೆ ಎಂದು ಪಕ್ಷಿ ತಜ್ಞರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos