ಕಾಂತಿಯುತ ಮುಖಕ್ಕೆ ಜೇನುತುಪ್ಪ

ಕಾಂತಿಯುತ ಮುಖಕ್ಕೆ ಜೇನುತುಪ್ಪ

ಬೆಂಗಳೂರು, ಸೆ. 14: ಜೇನುತುಪ್ಪಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗೆ ಚರ್ಮಕ್ಕೂ ಬಹಳ ಪ್ರಯೋಜನಕಾರಿ.

ಜೇನುತುಪ್ಪ-ನಿಂಬೆ ಹಣ‍್ಣು: ಒಂದು ಚಮಚ ಜೇನುತುಪ್ಪಕ್ಕೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಮಿಶ್ರಣ ತಯಾರಿ ಮಾಡಿಕೊಂಡು ಇದನ್ನ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.

ಜೇನುತುಪ್ಪ–ಉಪ್ಪು: ಜೇನುತುಪ್ಪಕ್ಕೆ ಉಪ್ಪನ್ನು ಬೆರೆಸಿ ಮುಖಕ್ಕೆ ಸ್ಕ್ರಬ್ ರೂಪದಲ್ಲಿ ಬಳಸಿ. ಸ್ವಲ್ಪ ಸಮಯದ ನಂತರ ಮುಖವನ್ನು ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ಮುಖ ಹೊಳಪು ಪಡೆಯುತ್ತದೆ.

ಜೇನುತುಪ್ಪ-ಅರಿಶಿನ-ಕಡಲೆಹಿಟ್ಟು: ಒಂದು ದೊಡ್ಡ ಚಮಚ ಕಡಲೆ ಹಿಟ್ಟಿಗೆ ಒಂದು ಚಮಚ ಜೇನುತುಪ್ಪ, ಸ್ವಲ್ಪ ಅರಿಶಿನ ಬೆರೆಸಿ ಮಿಶ್ರಣ ಸಿದ್ಧಪಡಿಸಿಕೊಳ್ಳಿ. ಇದನ್ನು ಇಡೀ ಮುಖಕ್ಕೆ ಹಚ್ಚಿಕೊಳ್ಳಿ. ಮಿಶ್ರಣ ಒಣಗಿದ ನಂತರ ಮುಖವನ್ನು ತೊಳೆದುಕೊಳ್ಳಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದ್ರೆ ಚರ್ಮದ ಬಣ್ಣ ಹೊಳಪು ಪಡೆಯುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos