ಹೋಮಿಯೋಪತಿ ಮಾತ್ರೆ ವಿತರಣೆ

ಹೋಮಿಯೋಪತಿ ಮಾತ್ರೆ ವಿತರಣೆ

ತುಮಕೂರು: ಕೋವಿಡ್-೧೯ ಸಮರದಲ್ಲಿ ಪೊಲೀಸರ ಸರಿಸಮನಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳ ಸಿಬ್ಬಂದಿಗೆ ರೋಗ ನಿರೋಧಕ ಮಾತ್ರೆಗಳನ್ನು ಸುರಭಿ ಶುದ್ಧ ಕುಡಿಯುವ ನೀರಿನ ಘಟಕದ ಸಿ.ಎ.ಫಣೀಂದ್ರ ಹಾಗೂ ಕವಿರತ್ನ ಕಾಳಿದಾಸ ಸಹಕಾರಿ ಸಂಘದ ಎಂ.ಧರ್ಮರಾಜು ನೇತೃತ್ವದ ಕೊರೋನಾ ವಾರಿರ‍್ಸ್ ತಂಡ ಸೋಮವಾರ ವಿತರಿಸಿತು.

ನಗರದ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹೋಮಿಯೋಪತಿ ಮಾತ್ರೆಗಳನ್ನು ವಿತರಿಸಿ ಮಾತನಾಡಿದ ಸುರಭಿ ಫಣೀಂದ್ರ ಅವರು, ಕೊರೊನಾ ವೈರಸ್ ತಡೆಗೆ ಸರಕಾರ, ಸಮುದಾಯ, ಹಲವಾರು ಸಂಘ ಸಂಸ್ಥೆಗಳು, ವೈದ್ಯರು, ಪೌರಕಾರ್ಮಿಕರು ಸೇರಿದಂತೆ ಅನೇಕರು ಶ್ರಮಿಸುತ್ತಿದ್ದಾರೆ. ಕೋವಿಡ್ ತಡೆಗೆ ಹೋಮಿಯೋಪತಿ ಔಷಧಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಹೋಂಗಾಡ್ಸ್ ಕಮಾಂಡೆಂಟ್ ಆರ್.ಪಾತಣ್ಣ ಮಾತನಾಡಿ, ಗೃಹರಕ್ಷಕ ದಳದವರು ಪೊಲೀಸ್ ಇಲಾಖೆಯೊಂದಿಗೆ ಸಮಾಜದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕಳೆದ ೬ ತಿಂಗಳಿನಿಂದ ಕೋವಿಡ್-೧೯ ಸಂದರ್ಭದಲ್ಲಿ ಪೊಲೀಸರ ಜೊತೆ ಸರಿಸಮನಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಮ್ಮ ತಂಡದ ಕಾರ್ಯ ವೈಖರಿಯನ್ನು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ಮಹಾಲಿಂಗಪ್ಪ ಎಸ್.ಲಂಗೋಟಿ, ಸ್ಟೇಷನ್ ಅಧಿಕಾರಿ ಪಂಚಾಕ್ಷರಿ ಮುಂತಾದವರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos