ಮುಖದ ಕಲೆ ಹೋಗಲಾಡಿಸಲು ಮನೆ ಮದ್ದು

ಮುಖದ ಕಲೆ ಹೋಗಲಾಡಿಸಲು ಮನೆ ಮದ್ದು

ಬೆಂಗಳೂರು, ಸೆ. 30: ನಮ್ಮ ಮುಖ ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ, ವಯಸ್ಸಾದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹಳೆ ಕಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಚರ್ಮದ ಸೌಂದರ್ಯವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದನ್ನು ಹೋಗಲಾಡಿಸಲು ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನ ಆಗುವುದಿಲ್ಲ.ಮಖದ ಕಲೆ ಹೊಗಲಾಡಿಸಲು ಮನೆಯಲ್ಲಿಯೇ ಇದೆ ಮದ್ದು.

5 ಬಾದಾಮಿ, 100 ಎಂ.ಎಲ್. ರೋಸ್ ವಾಟರ್, 1 ಚಮಚ ಶ್ರೀಗಂಧದ ಪುಡಿ ತೆಗೆದುಕೊಳ್ಳಿ. ಮೊದಲು ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಪುಡಿ ಮಾಡಿ.

ಅದಕ್ಕೆ ರೋಸ್ ವಾಟರ್ ಹಾಗೂ ಶ್ರೀಗಂಧದ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಇದನ್ನು ಬಾಟಲಿಯಲ್ಲಿ ಹಾಕಿ, ಶೇಕ್ ಮಾಡಿ. ಮಿಶ್ರಣ ದಪ್ಪವಾಗುವವರೆಗೆ ಹೀಗೆ ಮಾಡಿ. ನಂತರ ಕಲೆಯಾದ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಿ 1 ಗಂಟೆ ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಹಿಗೆ ಮಾಡುವುದರಿಂದ ನಿಮ್ಮ ಮುಖದಲ್ಲಿರು ಕಲೆಗಳು ಕೆಲವು ದಿನಗಳಲ್ಲಿ ಕಡಿಮೆಯಾಗುತ್ತವೆ.

 

ಫ್ರೆಶ್ ನ್ಯೂಸ್

Latest Posts

Featured Videos