ಬಾಯಿ ಹುಣ್ಣಿಗೆ ಮನೆ ಮದ್ದು

ಬಾಯಿ ಹುಣ್ಣಿಗೆ ಮನೆ ಮದ್ದು

ಬೆಂಗಳೂರು, ಆ. 27: ಮಾನವನ ದೇಹಕ್ಕೆ ಏನ್ನೇಲ್ಲಾ ಕಾಯಿಲೆಗಳು ಬರುತ್ತವೆ, ಎಲ್ಲಾ ಕಾಯಿಲೆಗೆ ಅನೇಕ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಹೌದು, ನಮ್ಮಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಬಾಯಿ ಹುಣ್ಣು ಸಮಸ್ಯೆ ಕಾಡುತ್ತದೆ. ಇದನ್ನು ಸಮಸ್ಯೆ ಎನ್ನುವುದಕ್ಕಿಂತ ಕಿರಿಕಿರಿ ಎನ್ನಬಹುದು. ಏಕೆಂದರೆ ಬಾಯಲ್ಲಿ ಹುಣ್ಣಾದರೆ ಅತ್ತ ಆಹಾರ ಸೇವಿಸಲು, ಇತ್ತ ಉಗುಳಲು ಆಗದಂತ ಪರಿಸ್ಥಿತಿ ತಲೆದೂರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಮನೆ ಔಷಧಗಳ ಮೂಲಕವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಶುದ್ಧ ತುಪ್ಪ: ಶುದ್ಧ ತುಪ್ಪವನ್ನು ಬಾಯಿ ಹುಣ್ಣಿರುವ ಜಾಗಕ್ಕೆ ಸವರಿ ಮಲಗಿದರೆ ಕೂಡ ಶೀಘ್ರದಲ್ಲೇ ಹುಣ್ಣು ವಾಸಿಯಾಗುತ್ತದೆ.

ತುಳಸಿ ಎಲೆ: ಬಾಯಿ ಹುಣ್ಣಾದಾಗ ತುಳಸಿ ಎಲೆಯನ್ನು ಜಗಿಯುವುದರಿಂದ ಸಹ ಪರಿಹಾರ ಕಂಡುಕೊಳ್ಳಬಹುದು.

ಅರಶಿಣ: ಅರಿಶಿಣವನ್ನು ಗ್ಲಿಸರಿನ್ಗೆ ಸೇರಿಸಿ ಹುಣ್ಣುಗಳಿಗೆ ಹಚ್ಚಿದರೂ ಹುಣ್ಣು ಮಾಯವಾಗುತ್ತದೆ.

ಸೀಬೆಕಾಯಿ ಎಲೆ: ಪೇರಲೆ ಅಥವಾ ಸೀಬೆಕಾಯಿ ಮರದ ಚಿಗುರು ಎಲೆಯ ರಸ ಹುಣ್ಣಿರುವ ಜಾಗಕ್ಕೆ ತಗುಲಿಸಿ ಕುಡಿಯುವುದರಿಂದ ಸಹ ಪರಿಹಾರ ಕಾಣಬಹುದು.

ಕೊತ್ತಂಬರಿ ಸೊಪ್ಪು: ಬಾಯಿ ಹುಣ್ಣು ಕಾಣಿಸಿದರೆ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಅದರ ನೀರನ್ನು ಕುಡಿಯಬೇಕು. ಹಾಗೆಯೇ ಕೊತ್ತಂಬರಿ ಕಾಳನ್ನು ನೆನೆ ಹಾಕಿದ ನೀರಿನಲ್ಲಿ ಬಾಯಿ ಮುಕ್ಕಳಿಸಿ ಪರಿಹಾರ ಕಾಣಬಹುದು.

ತೆಂಗಿನ ಕಾಯಿ: ತೆಂಗಿನ ಕಾಯಿಯ ಹಾಲು ಹಿಂಡಿ ಬಾಯಿ ಹುಣ್ಣಿಗೆ ಮಸಾಜ್ ಮಾಡಿದರೆ ಸಹ ಹುಣ್ಣು ವಾಸಿಯಾಗುತ್ತದೆ.

ಮೆಂತೆ ಕಾಳು: ರಾತ್ರಿ ಮಲಗುವ ಮೊದಲು ಮೆಂತೆ ಕಾಳನ್ನು ಬಾಯಿಯಲ್ಲಿ ಹಾಕಿ ಸ್ವಲ್ಪ ಹೊತ್ತು ಜಗಿದು ನುಂಗಿದರೂ ಬಾಯಿ ಹುಣ್ಣಿನ ಸಮಸ್ಯೆ ದೂರವಾಗುತ್ತದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos