ಸೊಂಟ ನೋವಿಗೆ ಮನೆ ಮದ್ದು

ಸೊಂಟ ನೋವಿಗೆ ಮನೆ ಮದ್ದು

ಬೆಂಗಳೂರು, ಸೆ. 24: ಹೆಚ್ಚಿನ ಜನರು ಒಂದಲ್ಲ ಒಂದು ಕಾರಣದಿಂದ ಸೊಂಟ ನೋವಿನಿಂದ ಬಳಲುತ್ತಿರುವುದು ಸಾಮಾನ್ಯ. ಈ ನೋವು ನಮ್ಮ ದಿನನಿತ್ಯದ ಕೆಲಸದ ಒತ್ತಡ, ಬದಲಾದ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ ಮಾಡುವವರಿಗೆ ಹಾಗೂ ಬೈಕ್ ನಲ್ಲಿ ದಿನದ 8-9 ಗಂಟೆ ಸುತ್ತಾಡುವ ನೌಕರರಿಗೆ ಸೊಂಟ ನೋವು ಖಾಯಂ ಆಗಿದೆ. ಈ ಸೊಂಟ ನೋವಿಗೆ ನೀವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು.

ತೆಂಗಿನ ಎಣ್ಣೆ: ತೆಂಗಿನ ಎಣ್ಣೆ ಸೊಂಟ ನೋವು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ. ತೆಂಗಿನ ಎಣ್ಣೆಗೆ ಸಿಪ್ಪೆ ತೆಗೆದ ಬೆಳ್ಳುಳ್ಳಿಯನ್ನು ಹಾಕಿ. ಆ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಮಸಾಜ್ ಮಾಡುತ್ತ ಬಂದ್ರೆ ಸೊಂಟ ನೋವು ಕಡಿಮೆಯಾಗುತ್ತದೆ.

ರಾಕ್ ಸಾಲ್ಟ್: ರಾಕ್ ಸಾಲ್ಟ್ ಕೂಡ ಸೊಂಟ ನೋವು ಕಡಿಮೆ ಮಾಡುತ್ತದೆ. ಸ್ನಾನ ಮಾಡುವ ನೀರಿಗೆ ರಾಕ್ ಸಾಲ್ಟ್ ಹಾಕಿ ಸ್ನಾನ ಮಾಡಿ. ಇದು ಸೊಂಟ ನೋವನ್ನು ಕಡಿಮೆ ಮಾಡುತ್ತದೆ.

ಬೆಳ್ಳುಳ್ಳಿ: ಬಿಸಿ ಮಾಡಿದ ಸಾಸಿವೆ ಎಣ್ಣೆಗೆ ಸುಟ್ಟ ಬೆಳ್ಳುಳ್ಳಿಯನ್ನು ಬೆರೆಸಿ ಆ ಎಣ್ಣೆಯನ್ನು ಹಚ್ಚಿಕೊಂಡ್ರೆ ನೋವು ಕಡಿಮೆಯಾಗಿ ಹಿತವೆನಿಸುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos