ಕೂದಲುದುರುವಿಕೆಗೆ ಮನೆ ಮದ್ದು

ಕೂದಲುದುರುವಿಕೆಗೆ ಮನೆ ಮದ್ದು

ಬೆಂಗಳೂರು, ಸೆ. 9: ಹೆಣ‍್ಣು ಮಕ್ಕಳಿಗೆ ಸೌಂದರ್ಯದ ಮೇಲೆ ಎಲ್ಲಿಲ್ಲದ ಕಾಳಜಿ. ಹೌದು, ಅದರಲ್ಲು ತಲೆ ಕೂದಲ ಮೇಲೆ ಜಾಸ್ಥಿ ಪ್ರೀತಿ ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ.  ಮನೆಯಲ್ಲಿ ಸುಲಭವಾಗಿ ಸಿಗುವ ದಾಸವಾಳದ ಹೂ ನಿಮ್ಮ ಕೂದಲಿಗೆ ಹೇಳಿ ಮಾಡಿಸಿದ ಔಷಧ. ಕೂದಲು ಉದುರುವುದನ್ನು ತಡೆಯುವ ಜೊತೆಗೆ ಗಟ್ಟಿಯಾದ ಸುಂದರ ಕಪ್ಪು ಕೂದಲು ಬೆಳೆಯಲು ನೆರವಾಗುತ್ತದೆ.

ದಾಸವಾಳ–ನೆಲ್ಲಿ

ದಾಸವಾಳ ಹಾಗೂ ನೆಲ್ಲಿ ರಸವನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

ದಾಸವಾಳ ಹಾಗೂ ಆಲಿವ್ ಆಯ್ಲ್  ಇದನ್ನು ಶಾಂಪೂ ರೀತಿಯಲ್ಲಿಯೂ ಬಳಸಬಹುದು. ದಾಸವಾಳದ ಎಲೆ ಹಾಗೂ ಹೂವನ್ನು ಮಿಶ್ರಮಾಡಿ ಅದಕ್ಕೆ ಸ್ವಲ್ಪ ಹನಿ ಆಲಿವ್ ಆಯಿಲ್ ಮಿಕ್ಸ್ ಮಾಡಿ ಬಳಸಿ.

ದಾಸವಾಳ-ಈರುಳ್ಳಿ

ದಾಸವಾಳದ ರಸ, ಈರುಳ್ಳಿ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯದ ನಂತರ ತೊಳೆಯಿರಿ.

ದಾಸವಾಳ-ಕರಿಬೇವು

ದಾಸವಾಳ ಹಾಗೂ ಕರಿಬೇವಿನ ಎಲೆಯ ರಸಕ್ಕೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಕೂದಲಿಗೆ ಹಚ್ಚಿಕೊಳ್ಳಿ.

 

ಫ್ರೆಶ್ ನ್ಯೂಸ್

Latest Posts

Featured Videos