ಕೂದಲುದುರುವಿಕೆಗೆ ಮನೆ ಮದ್ದು

ಕೂದಲುದುರುವಿಕೆಗೆ ಮನೆ ಮದ್ದು

ಬೆಂಗಳೂರು, ಸೆ. 13: ಇತ್ತೀಚಿನ ದಿನಗಳಲ್ಲಿ ಹವಮಾನದ ಬದಲಾವಣೆಯಿಂದ ಮಾನವನ ದೇಹದ ಮೇಲೆ ಹಲವಾರು ರೀತಿಯ ಪರಿನಾಮ ಬೀರುತ್ತಿದೆ.

ಹೌದು, ನೀರು, ವಾತಾವರಣ, ಬಳಸುವ ಪದಾರ್ಥಗಳಿಂದ ಕೂದಲು ಉದುರುವಿಕೆ ಹೆಚ್ಚಾಗಿದೆ. ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗದೇ ಇದ್ದ ಸಂದರ್ಭ, ಅತಿಯಾದ ಆಲೋಚನೆ, ತಲೆಗೆ ರಕ್ತ ಸಂಚಾರ ಸರಿಯಾಗಿ ಆಗದಿದ್ದರೆ, ಇವೇ ಮೊದಲಾದ ಸಮಸ್ಯೆಗಳಿಂದ ಕೂದಲು ಉದುರುತ್ತವೆ ಎನ್ನಲಾಗಿದೆ.

ಸೀಗೆಕಾಯಿ: ಸೀಗೆಕಾಯಿ, ನೆಲ್ಲಿಕಾಯಿಯನ್ನು 1 ಲೀಟರ್ ನೀರಿನಲ್ಲಿ 2 ದಿನ ನೆನೆಸಿರಿ. ನೀರನ್ನು ಕಾಯಿಗಳ ಸಮೇತ ಅರ್ಧ ಗಂಟೆ ಕುದಿಸಿರಿ.  ಇದು ತಣ್ಣಗಾದ ಬಳಿಕ ಬಾಟಲಿಗೆ ಸೋಸಿ ಇಟ್ಟುಕೊಳ್ಳಿ. ಶಾಂಪೂ ಬದಲಿಗೆ ಇದನ್ನೆ ಬಳಸುವುದರಿಂದ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.

ಅಕ್ಕಿ: ಅರ್ಧ ಲೋಟ ಅಕ್ಕಿಯನ್ನು 2 ಲೋಟ ನೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ನುಣ್ಣಗೆ ರುಬ್ಬಿಕೊಂಡು ತಲೆಗೆ ಹಚ್ಚಿರಿ ಅರ್ಧ ಗಂಟೆ ಬಳಿಕ ತೊಳೆಯಬೇಕು ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಶಾಂಪೂ, ಸೀಗೆಕಾಯಿ ಬಳಸುವಾಗಲೂ ಹೊಂದಿಕೆಯಾಗುವಂತಹುದನ್ನೇ ಬಳಸಿರಿ. ಕೂದಲು ಸ್ವಚ್ಛವಾಗಿಟ್ಟುಕೊಳ್ಳಿ

ನಿಂಬೆ ಹಣ‍್ಣು: ಒಣಗಿದ ನಿಂಬೆ ಹಣ‍್ಣಿನ ಸಿಪ್ಪೆಯನ್ನ ಪುಡಿ ಮಾಡಿ ಅದಕ್ಕೆ ಕೊಬ್ಬರಿ ಎಣ್ಣೆ, ದಾಸವಾಳದ ಹೂವಿನ ಪುಡಿ, ನೆಲ್ಲಿ ಕಾಯಿ ಪುಡಿ ಸೇರಿಸಿ ಈ ಮಿಶ್ರಣವನ್ನ ವಾರದಲ್ಲಿ 2 ಬಾರಿ ತಲೆಗೆ ಹಚ್ಚಿ ತಿಕ್ಕಿರಿ, ಮರುದಿನ ತಲೆ ಸ್ನಾನ ಮಾಡಿ. ನೆತ್ತಿ ತಂಪಾಗುವದರ ಜೊತೆಗೆ ಕೂದಲು ಉದುರುವುದು ನಿಲ್ಲುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos