ಕೆಮ್ಮಿಗೆ ಮನೆ ಮದ್ದು

ಕೆಮ್ಮಿಗೆ ಮನೆ ಮದ್ದು

ಬೆಂಗಳೂರು, ನ. 06: ಮನುಷ್ಯ ಹೆಚ್ಚಿನ ಪ್ರಾಧಾನ್ಯತೆಯನ್ನು ಆರೋಗ್ಯಕ್ಕೆ ನೀಡುತ್ತಾನೆ ಒಂದು ಸಣ್ಣಪುಟ್ಟ ಕಾಯಿಲೆ ಬಂದರೂ ಅದನ್ನು ಸಹಿಸಿಕೊಳ್ಳುವ ಶಕ್ತಿ ಮನುಷ್ಯನಿಗಿರುವುದಿಲ್ಲ ಅಂಥದ್ದೇ ಒಂದು ಸಣ್ಣ ಕಾಯಿಲೆಯಾದರೂ ದೊಡ್ಡ ಪರಿಣಾಮ ಬೀರುವ ಕಾಯಿಲೆ ಕೆಮ್ಮು.

ತುಂಬಾ ಜನ ಸಾಮಾನ್ಯವಾಗಿ ಯಾವಾಗಲು ಕೆಮ್ಮು ತ್ತಿರುತ್ತಾರೆ ಅವರು ಹೇಳುವ ಒಂದೇ ಒಂದು ಮಾತೆಂದರೆ ಕೆಮ್ಮು ಕಡಿಮೆಯೇ ಆಗಿಲ್ಲ ಎಂದು. ಈ ಕೆಮ್ಮಿಗೆ ಹೊರಗಿನ ಚಿಕಿತ್ಸೆಗಿಂತ ಮನೆ ಮದ್ದು ಹೆಚ್ಚು ಸಹಕಾರಿ ಯಾಗುತ್ತದೆ.

ಹೌದು, ಕೆಮ್ಮು ಶ್ವಾಸಕೋಶದ ನಾಲೆಗಳ ವ್ಯವಸ್ಥೆಯನ್ನು ಸಂಪೂರ್ಣ ಅಸ್ತವ್ಯಸ್ಥಗೊಳಿಸುತ್ತಿದೆ ಅಷ್ಟೇ ಅಲ್ಲದೆ ಇತರ ಕಾಯಿಲೆಗಳಿಗೂ ನಾಂದಿ ಹಾಡುತ್ತದೆ ಕೆಮ್ಮು ಮನುಷ್ಯನನ್ನು ಒಂದು ಮಟ್ಟಿಗೆ ನಿಶ್ಯಕ್ತ ನನ್ನಾಗಿ ಮಾಡುತ್ತದೆ ಎಂದರೂ ತಪ್ಪಾಗುವುದಿಲ್ಲ ಕೆಮ್ಮಿನ ಅತ್ಯಂತ ಸಾಮಾನ್ಯ ಕಾರಣಗಳು ಶೀತ ಜ್ವರ ತಲೆನೋವು ಬ್ರಂಕೈಟಿಸ್ ನಿರಂತರವಾಗಿ ಕೆಮ್ಮು ಅಥವಾ ಬ್ರಂಕೈಟಿಸ ನಿಂದ ಬಳಲುತ್ತಿರುವವರಿಗೆ ಇಲ್ಲಿ ನಾವು ಪರಿಹಾರವನ್ನು ಕೊಡುತ್ತಿದ್ದೇವೆ.

ಕೆಮ್ಮು ವರಿಗಷ್ಟೇ ಕೆಮ್ಮುವುದು ಎಷ್ಟು ಕಷ್ಟ ಎಂದು ತಿಳಿದಿರುತ್ತದೆ. ಕೆಮ್ಮು ಇಲ್ಲದವರಿಗೆ ಕೆಮ್ಮಿಗೆ ಪರಿಹಾರವನ್ನು ಹೇಳುತ್ತಿರುವುದು ಸಾಮಾನ್ಯ ವಿಷಯವಾಗಿರುತ್ತದೆ ಆದ್ದರಿಂದ ಸ್ನೇಹಿತರೇ ಸಾಧ್ಯವಾದಷ್ಟು ಮಟ್ಟಿಗೆ ಕೆಮ್ಮಿನಿಂದ ಬಳಲುತ್ತಿರುವವರಿಗೆ ಈ ವಿಧಾನವನ್ನು ಹೇಳಿ.

ಮೊದಲು ನೀರನ್ನು ಕುದಿಸಿ ಬಾಳೆ ಹಣ್ಣುಗಳ ಸಿಪ್ಪೆ ಸುಲಿದು ನುಣ್ಣಗೆ ಪೇಸ್ಟ್ ರೀತಿ ತಯಾರಿಸಿಕೊಳ್ಳಿ ಕುದಿಯುವ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಅನಂತರ ಪಾತ್ರೆಯನ್ನು ಪಕ್ಕಕ್ಕೆ ಇಳಿಸಿ ಮಿಶ್ರಣವನ್ನು ತಣ್ಣಗಾಗಲು ಬಿಡಿ ಇದಾದ ನಂತರ ಜೇನುತುಪ್ಪವನ್ನು ಸೇರಿಸಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.

ದಿನಕ್ಕೆ 4 ಬಾರಿ ಈ ಮಿಶ್ರಣವನ್ನು ಸೇವಿಸಬೇಕು. ಬಳಕೆಗೆ ಸ್ವಲ್ಪ ಮೊದಲು ಇದನ್ನು ಸ್ವಲ್ಪ ಬಿಸಿ ಮಾಡಿಕೊಂಡು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ದಿನಕ್ಕೆ ನಾಲ್ಕು ಬಾರಿ ಕೂಡ ಸ್ವಲ್ಪ ಬಿಸಿ ಮಾಡಿ ಸೇವಿಸಬೇಕು ಇದು ಸುಲಭವಾದ ವಿಧಾನ ಈ ವಿಧಾನವನ್ನು ಬಳಸಿ ಕೆಮ್ಮಿನಿಂದ ಮುಕ್ತಿ ಕೊಡುತ್ತದೆ ಜೊತೆಗೆ ಬಾಳೆಹಣ್ಣಿನಲ್ಲಿ ಸಿರೊಟೋನಿನ್ ಮಟ್ಟ ಹೆಚ್ಚಿರುವುದರಿಂದ ಈ ಮಿಶ್ರಣವೂ ಉತ್ತಮ ನಿದ್ರೆಗೆ ಸಹಾಯ ಮಾಡುತ್ತ. ಎಷ್ಟೊಂದು ಜನ ಕೆಮ್ಮು ಆರಂಭವಾದಾಗ ನಿದ್ದೆಯನ್ನೇ ಮಾಡಿರುವುದಿಲ್ಲ ಕೆಮ್ಮು ಯಾರನ್ನೂ ಕೂಡ ನಿದ್ದೆ ಮಾಡಲು ಬಿಟ್ಟಿರುವುದೂ ಇಲ್ಲ ಆದ್ದರಿಂದ ಈ ಮಿಶ್ರಣವು ನಿದ್ದೆಗೆ ಸಹಾಯಕವಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos