ಮನೆ ಮದ್ದು ದೊಡ್ಡಪತ್ರೆ

ಮನೆ ಮದ್ದು ದೊಡ್ಡಪತ್ರೆ

ಬೆಂಗಳೂರು, ನ. 08: ದೊಡ್ಡಪತ್ರೆ ಇದು ಹಿಂದೆ ಕಾಲರಾದಂತಹ ರೋಗವನ್ನೇ ಹತೋಟಿಗೆ ತರುವಂತಹ ಶಕ್ತಿಯನ್ನು ಹೊಂದಿತ್ತು ಎಂದರೆ ಅಚ್ಚರಿಯಾಗಬಹುದು.

ನೆಗಡಿ ಕೆಮ್ಮು ದೂರ: ದೊಡ್ಡಪತ್ರೆಯನ್ನ ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ಕಫ, ಉಬ್ಬಸ ನಿವಾರಣೆಗೆ ಬಳಸಬಹುದು. ಗಿಡದಿಂದ ಎಲೆಗಳನ್ನು ತೆಗೆದು ಚೆನ್ನಾಗಿ ತೊಳೆದು ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬೇಕು ಅಥವಾ ದೊಡ್ಡಪತ್ರೆ ಎಲೆಯೊಂದಿಗೆ ತುಳಸಿ ಎಲೆಯನ್ನು ಅರೆದು ಅದರ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ.

ಜ್ವರ ಕಡಿಮೆಯಾಗುತ್ತದೆ: ಇದೇ ರೀತಿ 4ರಿಂದ 5 ಎಲೆಗಳನ್ನು ಕೆಂಡದ ಮೇಲೆ ಬಾಡಿಸಿ ರಸವನ್ನು ತೆಗೆದು ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಅಥವಾ ಮಕ್ಕಳಿಗೆ ಜ್ವರ ಬಂದಾಗ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ. ಶೀತದಿಂದಾಗಿ ಮಕ್ಕಳಿಗೆ ಮಲಬದ್ದತೆಯಾದರೆ ಎಲೆಗಳ ಸರವನ್ನು ಜೇನುತುಪ್ಪ ಬೆರೆಸಿ ಕುಡಿಸಿದರೆ ಮಲಬದ್ದತೆ ನಿವಾರಣೆಯಾಗುತ್ತದೆ. ಅರಸಿನ ಕಾಮಾಲೆ ರೋಗವುಳ್ಳವರು 10 ದಿನಗಳ ಕಾಲ ದೊಡ್ಡಪತ್ರೆ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸಿದರೆ ರೋಗ ಗುಣವಾಗುತ್ತದೆ.

ಜೀರ್ಣಶಕ್ತಿ ಹೆಚ್ಚುತ್ತದೆ: ಎಲೆಯನ್ನು ಉಪ್ಪಿನೊಂದಿಗೆ ನೆಂಚಿಕೊಂಡು ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ. ದೊಡ್ಡಪತ್ರೆ ಎಲೆಯನ್ನು ಜಜ್ಜಿ ಆದರ ವಾಸನೆ ಸೇವಿಸಿದರೆ ಕಟ್ಟಿದ ಮೂಗಿನಿಂದ ನಿವಾರಣೆಯನ್ನು ಹೊಂದಬಹುದು. ಗ್ಯಾಸ್ಟ್ರಿಕ್ ತಡೆಯುತ್ತದೆ.

ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು.

ಫ್ರೆಶ್ ನ್ಯೂಸ್

Latest Posts

Featured Videos