ಮನೆಗೆ ನುಗ್ಗಿ ಬರ್ಬರ ಹತ್ಯೆ

ಮನೆಗೆ ನುಗ್ಗಿ ಬರ್ಬರ ಹತ್ಯೆ

ನೆಲಮಂಗಲ, ನ. 28 : ಮನೆಗೆ ನುಗ್ಗಿದ ದುಷ್ಕರ್ಮಿಗಳು ಪತ್ನಿ ಮತ್ತು ಮಗಳನ್ನು ಕೊಠಡಿಯಲ್ಲಿ ಕೂಡಿಹಾಕಿ ಪತಿಯನ್ನು ಕೊಲೆ ಮಾಡಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೇಣುಕಾನಗರ ಬಡಾವಣೆ ನಿವಾಸಿ ಶಫಿವುಲ್ಲಾ(65) ಕೊಲೆಯಾದ ದುರ್ದೈವಿ.
ನಿನ್ನೆ ರಾತ್ರಿ 9 ಗಂಟೆ ಸುಮಾರಿನಲ್ಲಿ ಇಬ್ಬರು ದುಷ್ಕರ್ಮಿಗಳು ಮನೆ ಬಾಗಿಲು ತಟ್ಟಿದ್ದಾರೆ. ಏಕಾಏಕಿ ಒಳಗೆ ನುಗ್ಗಿದ ದುಷ್ಕರ್ಮಿಗಳು ಬಾಗಿಲು ಚಿಲಕ ಹಾಕಿ ಶಫಿವುಲ್ಲಾ ಅವರ ಮಗಳು ಹಾಗೂ ಎರಡನೆ ಪತ್ನಿಯನ್ನು ಒಂದು ಕೊಠಡಿಯಲ್ಲಿ ಕೂಡಿಹಾಕಿದ್ದಾರೆ. ನಂತರ ಶಫಿವುಲ್ಲಾ ಅವರ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos