ನೀತಿ ಸಂಹಿತೆ ಉಲ್ಲಂಘಿಸಿದ ಗೃಹ ಸಚಿವ

ನೀತಿ ಸಂಹಿತೆ ಉಲ್ಲಂಘಿಸಿದ ಗೃಹ ಸಚಿವ

ಮಂಡ್ಯ, ನ. 21 : ಗೃಹಸಚಿವ ಬಸವರಾಜ ಬೊಮ್ಮಾಯಿ ಅವರೇ ನೀತಿ ಸಂಹಿತೆ ಉಲ್ಲಂಘಿಸಿದ ಘಟನೆ ಮಂಡ್ಯದಲ್ಲಿಂದು ನಡೆದಿದೆ. ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ ಹಿನ್ನಲೆ ನೀತಿ ಸಂಹಿತಿ ಜಾರಿಯಲ್ಲಿದೆ. ಆದರೆ, ಗೃಹ ಮಂತ್ರಿ ಎರಡು ಕಡೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ನೀತಿ ಸಂಹಿತೆ ಉಲ್ಲಂಘಿಸಿದ ಘಟನೆ ತಾಲೂಕಿನ ಹನಕೆರೆ ಬಳಿ ಘಟನೆ ನಡೆದಿದೆ.
ಬಸವರಾಜ್ ಬೊಮ್ಮಾಯಿ ಕಾರಿನಲ್ಲಿ ಹೋಗುತ್ತಿದ್ದಾಗ ವಾಹನ ತಪಾಸಣೆಗೆಂದು ಚುನಾವಣಾ ಸಿಬ್ಬಂದಿ ಕಾರನ್ನು ತಡೆಯಲು ಮುಂದಾದರು. ಆದರೆ ಬೊಮ್ಮಾಯಿ ವಾಹನ ತಪಾಸಣೆಗೆ ಸಹಕರಿಸದೆ ಚುನಾವಣಾ ಸಿಬ್ಬಂದಿಗೂ ಕ್ಯಾರೆ ಎನ್ನದೇ ಮುಂದೆ ಸಾಗಿದ್ದಾರೆ.
ಬುಧವಾರ ಎರಡು ಕಡೆ ಚೆಕ್ ಪೋಸ್ಟ್ ಸಿಬ್ಬಂದಿ ಬೆಂಗಳೂರಿಂದ ಮೈಸೂರಿನತ್ತ ತೆರಳುತ್ತಿದ್ದ ಬಸವರಾಜ್ ಅವರ ವಾಹವನ್ನು ತಡೆದಿದ್ದರು. ಮೊದಲು ನಿಡಘಟ್ಟ ಬಳಿ ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ ಹನಕೆರೆ ಬಳಿ ವಾಹನ ತಪಾಸಣೆಗೆ ಚೆಕ್ ಪೋಸ್ಟ್ ಸಿಬ್ಬಂದಿ ಸಿದ್ಧವಾಗಿದ್ದರು. ಇಲ್ಲೂ ವಾಹನ ನಿಲ್ಲಿಸದೆ ಸಚಿವರ ಉದ್ಧಟತನ ಪ್ರದರ್ಶಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos