ಗೃಹ ಪ್ರವೇಶ : 40 ಮಂದಿ ಅಸ್ವಸ್ಥ

ಗೃಹ ಪ್ರವೇಶ : 40 ಮಂದಿ ಅಸ್ವಸ್ಥ

ಹಾಸನ, ನ. 11 : ಜಿಲ್ಲೆಯ ಗುಡ್ಡೇನಹಳ್ಳಿಯಲ್ಲಿ ಭಾನುವಾರ ಗೃಹ ಪ್ರವೇಶ ಹಿನ್ನಲೆ ಆಹಾರ ಸೇವಿಸಿ 40 ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಗುಡ್ಡೇನಹಳ್ಳಿಯಲ್ಲಿ ಮನೆಯೊಂದರ ಗೃಹ ಪ್ರವೇಶವಿದ್ದ ಕಾರಣ ಕಾರ್ಯಕ್ರಮಕ್ಕೆ ಬಂದಿದ್ದ 40 ಮಂದಿ ಅಸ್ವಸ್ಥಗೊಂಡಿದ್ದಾರೆ. ಊಟ ಮಾಡಿದ ಬಳಿಕ ವಾಂತಿ, ಭೇದಿ ಶುರುವಾಗಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿ 40 ಮಂದಿ ಅಸ್ವಸ್ಥಗೊಂಡಿದ್ದಾರೆ.
ತಕ್ಷಣ ಹಾಸನದ ಹಿಮ್ಸ್ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಕಲುಷಿತ ಆಹಾರ ಸೇವನೆಯಿಂದ ಜನರು ಅಸ್ವಸ್ಥರಾಗಿದ್ದಾರೆ ಎಂದು ಶಂಕಿಸಲಾಗಿದೆ.

ಇಲ್ಲದಿದ್ದರೆ ಆಹಾರದಲ್ಲಿ ವ್ಯತ್ಯಾಸವಾಗಿ ಹೀಗಾಗಿರಬಹುದಾ? ಯಾರಾದರೂ ಆಹಾರದಲ್ಲಿ ಕಲಬೆರಕೆ ಮಾಡಿರಬಹುದಾ ಎಂಬ ಹತ್ತು ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಫ್ರೆಶ್ ನ್ಯೂಸ್

Latest Posts

Featured Videos