ಆಕಾಶದಲ್ಲಿ ಮೂಡಿದ ಆಶ್ಚರ್ಯಕರ ವೃತ್ತ!

ಆಕಾಶದಲ್ಲಿ ಮೂಡಿದ ಆಶ್ಚರ್ಯಕರ ವೃತ್ತ!

ಬೆಂಗಳೂರು, ಮಾ, 21, ನ್ಯೂಸ್ ಎಕ್ಸ್ ಪ್ರೆಸ್: ಯುನೈಟೆಡ್ ಅರೇಬಿಕ್ ಎಮಿರೇಟ್ಸ್ ನ ನಗರವೊಂದರ ಆಕಾಶದಲ್ಲಿ ವಿಸ್ಮಯದ ವೃತ್ತವೊಂದು ಕಾಣಿಸಿಕೊಂಡಿದೆ. ಇಬ್ರಾಹಿಂ‌ ಅಲ್ ಜರ್ವನ್ ಎಂಬಾತ ಆಕಾಶದಲ್ಲಿ ಕಾಣಿಸಿಕೊಂಡ ಗೋಳಾಕೃತಿಯ ವಿಡಿಯೋ ತೆಗೆದು ಟ್ವಿಟ್ಟರ್ ನಲ್ಲಿ ಹರಿಬಿಟ್ಟಿದ್ದಾನೆ. ಈ ಪೋಟೋ ನೋಡಿದ ಟ್ವಿಟ್ಟಿಗರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸುಳಿಯ ವೃತ್ತವೆಂದು ಕೆಲವರು ಬಣ್ಣಿಸಿದರೆ, ಮತ್ತೊಬ್ಬರು ಬೇರೆ ಜಗತ್ತಿನ ಚಿತ್ರಣವೆಂದು ಹೇಳಿದ್ದಾರೆ. ಈ ವಿಡಿಯೋವನ್ನ ಅನೇಕರು ಶೇರ್ ಮಾಡಿ ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಆಕಾಶದಲ್ಲಿ ಮೂಡಿದ ದೊಡ್ಡದಾದ ವೃತ್ತದ ಬಗ್ಗೆ ತಜ್ಞರು, ಇದನ್ನ ಪಥನದ ಗುಳಿ ಎಂದು ಕರೆದಿದ್ದಾರೆ. ಮೋಡಗಳಲ್ಲಿನ ನೀರಿನ ಉಷ್ಣತೆಯು ಘನೀಕರಣಕ್ಕಿಂತ ಕೆಳಗಿರುತ್ತದೆ, ಆದರೆ ಮಂಜುಗಡ್ಡೆಯ ಸ್ಥಿತಿಯಲ್ಲಿರುವ ನೀರು, ಹಿಮ ಬೀಜಕಣಗಳ ಕೊರತೆಯಿಂದಾಗಿ ಹೆಪ್ಪುಗಟ್ಟಿರುವುದಿಲ್ಲ. ಈ ಕಾರಣದಿಂದ ಪಥನ ಗುಳಿ ಸಂಭವಿಸುತ್ತವೆ ಎಂದು ಡೈಲಿ ಮೈಲ್ ವರದಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos