ಹಾಕಿ: ಸೆಮಿಫೈನಲ್ ಗೆ ಎಂಟ್ರಿ ಕೊಟ್ಟ ಭಾರತ

ಹಾಕಿ: ಸೆಮಿಫೈನಲ್ ಗೆ ಎಂಟ್ರಿ ಕೊಟ್ಟ ಭಾರತ

ಭುವನೇಶ್ವರ್, ಜೂನ್.11, ನ್ಯೂಸ್ ಎಕ್ಸ್ ಪ್ರೆಸ್: ಎಫ್ಐಎಚ್ ಹಾಕಿ ಸೀರೀಸ್ ಫೈನಲ್ಸ್ ನಲ್ಲಿ ಭಾರತ ತಂಡ ಉಜ್ಜೇಕಿಸ್ತಾನದ ವಿರುದ್ಧ 10-0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಅಕ್ಷದೀಪ್ ಸಿಂಗ್ (11,26,53) ಹ್ಯಾಟ್ರಿಕ್ ಗೋಲು ಸಿಡಿಸಿದರೆ, ವರುಣ್ (4,22) ಹಾಗೂ ಮಂದೀಪ್ (30,60) ಜೋಡಿ ಗೋಲು ದಾಖಲಿಸಿದರು. ಉಳಿದಂತೆ ಅಮಿತ್ (15), ನೀಲಕಂಠ ಶರ್ಮಾ (27) ಹಾಗೂ ಗುರ್ ಸಾಹಬ್ಜಿತ್ (45) ಗೆಲುವಿಗೆ ನೆರವಾದರು.
ಇನ್ನು ಏಷ್ಯಾಡ್ ಚಾಂಪಿಯನ್ ಜಪಾನ್ ಹಾಗೂ ಪೋಲೆಂಡ್ ತಂಡಗಳು ನಾಳೆ ಕ್ರಾಸ್ ಓವರ್ ಪಂದ್ಯದಲ್ಲಿ ಎದುರಾಗಲಿದ್ದು, ಇದರಲ್ಲಿ ಗೆದ್ದ ತಂಡವನ್ನು ಭಾರತ ಜೂನ್. 14ರಂದು ನಡೆಯಲಿರುವ ಸೆಮಿಫೈನಲ್ ನಲ್ಲಿ ಎದುರಿಸಲಿದೆ.

ಫ್ರೆಶ್ ನ್ಯೂಸ್

Latest Posts

Featured Videos