ಭರ್ಜರಿ ಸೆಂಚುರಿ ಸಿಡಿಸಿದ ಹಿಟ್‌ ಮ್ಯಾನ್

ಭರ್ಜರಿ ಸೆಂಚುರಿ ಸಿಡಿಸಿದ ಹಿಟ್‌ ಮ್ಯಾನ್

ಬೆಂಗಳೂರು: ರಾಜ್​ಕೋಟ್​ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ರೋಹಿತ್ ಶರ್ಮಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಅಮೋಘ ಇನಿಂಗ್ಸ್ ಕಟ್ಟಿದ್ದಾರೆ.

ಆದರೆ ನಿರೀಕ್ಷಿತ ಆರಂಭ ಪಡೆಯುವಲ್ಲಿ ಟೀಮ್ ಇಂಡಿಯಾ ವಿಫಲವಾಯಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬೇಗನೆ ಔಟಾದರೆ, ಶುಭ್​ಮನ್ ಗಿಲ್ ಶೂನ್ಯದೊಂದಿಗೆ ಮರಳಿದ್ದರು. ರಜತ್ ಪಾಟಿದಾರ್ ಕಲೆಹಾಕಿದ್ದು ಕೇವಲ 5 ರನ್​ಗಳು ಮಾತ್ರ.

ರವೀಂದ್ರ ಜೊತೆಗೂಡಿ 4ನೇ ವಿಕೆಟ್​ಗೆ 150* ರನ್​ಗಳ ಜೊತೆಯಾಟವಾಡಿದ ರೋಹಿತ್ ಶರ್ಮಾ ಭಾರತ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಲ್ಲದೆ 157 ಎಸೆತಗಳಲ್ಲಿ 11 ಫೋರ್ ಹಾಗೂ 2 ಭರ್ಜರಿ ಸಿಕ್ಸರ್​ನೊಂದಿಗೆ ಆಕರ್ಷಕ ಶತಕ ಪೂರೈಸಿದರು.

ರೋಹಿತ್ ಶರ್ಮಾ (102) ಅವರ ಈ ಭರ್ಜರಿ ಶತಕ ಹಾಗೂ ರವೀಂದ್ರ ಜಡೇಜಾ (68) ಅವರ ಅರ್ಧಶತಕದ ನೆರವಿನಿಂದ ಇದೀಗ ಟೀಮ್ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದು, 53 ಓವರ್​ಗಳ ಮುಕ್ತಾಯದ ವೇಳೆಗೆ ಭಾರತ ತಂಡವು 3 ವಿಕೆಟ್​ ಕಳೆದುಕೊಂಡು 190 ರನ್ ಕಲೆಹಾಕಿದೆ. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ ದಾಪುಗಾಲಿಟ್ಟಿದೆ.

 

ಫ್ರೆಶ್ ನ್ಯೂಸ್

Latest Posts

Featured Videos