ಹಿಟ್‌ ಮ್ಯಾನ್‌ ಮೇಲೆ ಎಲ್ಲರ ಕಣ್ಣು!     

ಹಿಟ್‌ ಮ್ಯಾನ್‌ ಮೇಲೆ ಎಲ್ಲರ ಕಣ್ಣು!     

ಬೆಂಗಳೂರು: ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೇಡ್ ವಿಂಡೋ ಮೂಲಕ ಖರೀದಿಸಿ ನಾಯಕನ ಪಟ್ಟ ನೀಡಿದೆ.

ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಮಾಜಿ ಕ್ಯಾಪ್ಟನ್​ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅತ್ತ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಪದಚ್ಯುತಿಗೊಳ್ಳುತ್ತಿದ್ದಂತೆ, ಇತ್ತ ಕೆಲ ಫ್ರಾಂಚೈಸಿಗಳು ಹಿಟ್​ಮ್ಯಾನ್​ ಖರೀದಿಗೆ ಆಸಕ್ತಿ ತೋರಿದೆ.

ಇದರ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ಕೂಡ ರೋಹಿತ್ ಶರ್ಮಾ ಅವರ ಖರೀದಿಗೆ ಮುಂದಾಗಿರುವುದು ಬಹಿರಂಗವಾಗಿದೆ. ಹಿಟ್​ಮ್ಯಾನ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಗುಜರಾತ್ ಫ್ರಾಂಚೈಸಿ ಬಯಸಿತ್ತು. ಅದರಂತೆ ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆಯನ್ನೂ ಕೂಡ ನಡೆಸಿದೆ. ಎರಡೂ ಫ್ರಾಂಚೈಸಿಗಳು ಸಹಮತಕ್ಕೆ ಬಾರದ ಕಾರಣ ಇದೀಗ ಈ ಡೀಲ್ ಕೂಡ ಕ್ಯಾನ್ಸಲ್ ಆಗಿದೆ ಎಂದು ವರದಿಯಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos