ಬೆಂಗಳೂರು: ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಇದು 10ನೇ ಸೀಸನ್. ಈ ಸೀಸನ್’ನಲ್ಲಿ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಕೆ ಮಾಡಿ ಸ್ನೇಹಿತ್ ಮತ್ತು ಮೈಕಲ್ ಅವರನ್ನು ಸೇವ್ ಮಾಡಿದ್ದಾರೆ. ಈ ಬೆಳವಣಿಗೆ ಕೇವಲ ಸ್ಪರ್ಧೆಯ ದೃಷ್ಟಿಕೋನದಿಂದಲ್ಲ. ಬದಲಾಗಿ ಕನ್ನಡದ ಮೇಲಿನ ವಿಶೇಷ ಅಭಿಮಾನದಿಂದ ಎಂದು ಹೇಳಲಾಗುತ್ತಿದೆ.
ವೀಕೆಂಡ್ ಬಂತೆಂದರೆ ಸ್ಪರ್ಧಿಗಳಿಗೆ ನಡುಕ, ಆದ್ರೆ ವೀಕ್ಷಕರಿಗೆ ಕಿಚ್ಚನ ಮಾತು ಕೇಳೋ ತವಕ. ಅಂದಹಾಗೆ ಈ ವಾರ ದೊಡ್ಮನೆಯಿಂದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗ್ಬೇಕಿತ್ತು. ಆದರೆ ಈ ವಾರ ಯಾರೂ ಕೂಡ ಹೊರಹೋಗಿಲ್ಲ.
ಕೊನೆಯದಾಗಿ ಈ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ನೇಹಿತ್ ಮತ್ತು ಮೈಕಲ್ ಇದ್ದರು. ಎಲ್ಲರೂ ಈ ವಾರ ಸ್ನೇಹಿತ್ ಮನೆಯಿಂದ ಹೊರ ಬರ್ತಾರೆ ಎಂದು ಅಂದುಕೊಂಡಿದ್ದರು. ಆದರೆ, ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ಮೈಕಲ್ ಮತ್ತು ಸ್ನೇಹಿತ್ ಅವರನ್ನು ಮನೆಯಲ್ಲೇ ಉಳಿಸಿಕೊಂಡಿದ್ದಾರೆ.