ಹಿಂದೂ ಮಹಿಳೆಯ ಶವ ಹೊತ್ತೊಯ್ದ ಮುಸ್ಲಿಂ ಯುವಕರು

ಹಿಂದೂ ಮಹಿಳೆಯ ಶವ ಹೊತ್ತೊಯ್ದ ಮುಸ್ಲಿಂ ಯುವಕರು

ನವದೆಹಲಿ, ಏ. 8 : ದೇಶದೆಲ್ಲೆಡೆ ಲಾಕ್ಡೌನ್ ಹಿನ್ನಲೆ ಮನೆಯೊಳಗೇ ಇರಬೇಕಾದ ಸ್ಥಿತಿ ಎದುರಾಗಿದೆ. ಮಧ್ಯ ಪ್ರದೇಶದಲ್ಲಿ ಮಾನವೀತೆಯಿಂದ ಮೆರೆದ ಮುಸ್ಲಿಂ ಯುವಕರು. ಹಿಂದೂ ಮಹಿಳೆಯೊಬ್ಬರ ಮೃತದೇಹ ಕೊಂಡೊಯ್ಯಲು ವಾಹನ ಸಿಗದೆ, ಮುಸ್ಲಿಂ ಯುವಕರೇ ಆಕೆಯ ಮೃತದೇಹ ಸ್ಮಶಾನಕ್ಕೆ ಹೊತ್ತೊಯ್ದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ದೇಶದೆಲ್ಲೆಡೆ ಕೋಮುಗಲಭೆಯ ಪರಿಸ್ಥಿತಿ ಧಾರ್ಮಿಕ ಸಾಮರಸ್ಯ ಸಾರಿದ ಯುವಕರ ನಡೆಗೆ ಮೆಚ್ಚುಗೆಗಳು ವ್ಯಕ್ತವಾಗಿವೆ.
ಅನಾರೋಗ್ಯದಿಂದ ಸಾವನ್ನಪ್ಪಿದ್ದ ಇಂದೋರ್ನ ಮಹಿಳೆಯ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಯಾವ ವಾಹನವೂ ಸಿಗಲಿಲ್ಲ. ಆಕೆ ಕೊರೋನಾ ವೈರಸ್ನಿಂದ ಸಾವನ್ನಪ್ಪಿರಬಹುದು ಎಂಬ ಭೀತಿಯಲ್ಲಿ ಆಕೆಯ ಸಂಬಂಧಿಕರು ಕೂಡ ಮೃತದೇಹವನ್ನು ಮುಟ್ಟಲು ಬರಲಿಲ್ಲ. ಆಗ ಆ ಊರಿನಲ್ಲಿದ್ದ ಮುಸ್ಲಿಂ ಯುವಕರು ಖುದ್ದಾಗಿ ಆ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಬೇಕಾದ ತಯಾರಿ ಮಾಡಿಕೊಂಡು, ಚಟ್ಟವನ್ನು ಸಿದ್ಧಪಡಿಸಿ ಆ ಚಟ್ಟದಲ್ಲಿ ಮೃತದೇಹವನ್ನು ಹೊತ್ತು ಸ್ಮಶಾನಕ್ಕೆ ಸಾಗಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos