ಹಿಂದೂ ರಾಷ್ಟ್ರ ಜಾಗೃತಿಯ ಸಭೆ

ಹಿಂದೂ ರಾಷ್ಟ್ರ ಜಾಗೃತಿಯ ಸಭೆ

ಧಾರವಾಡ, ಜ. 20: ಹಿಂದೂ ವಿಚಾರಗಳ ಮೇಲೆ ಅಧಿಕವಾದ ಶೋಷಣೆಯನ್ನು ಮಾಡುತ್ತಿರುವವರಿಗೆ ಪರಮಾತ್ಮನ ಸನ್ನಿಧಿಯಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ವಿದುಳಾ ಹಳದಿಪುರ ಹೇಳಿದರು.

ನಗರದ ದೈವಜ್ಞ ಸಭಾ ಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿಯ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಪರಂಪರೆ ಹಾಗೂ ಹಿಂದೂ ಸಂಘಟನೆಗಳ ಅವಶ್ಯಕತೆ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಹಿಂದೂ ವಿರೋಧಿಗಳು ಹಿಂದೂ ರಾಷ್ಟ್ರ ವಿರೋಧಿಸುತ್ತಿದ್ದಾರೆ. ಆದರೆ ಹಿಂದೂ ರಾಷ್ಟ್ರ ನಮ್ಮ  ಮುಂದಿನ ಪಿಳಿಗೆಗೆ ಅವಶ್ಯವಾಗಿದೆ ಇಂದು ಹಿಂದೂತ್ವದ ವಿಚಾರಗಳಿಗಾಗಿ ಹೋರಾಡಲು ಸಮಿತಿ ಸದಾ ಸಿದ್ಧವಾಗಿದೆ.  ಭಾರತ ಯಾಕೆ ಹಿಂದೂ ರಾಷ್ಟ್ರ ಆಗಬಾರದು ಎಂದು ಪ್ರಶ್ನಿಸಿದರು.

ಸತತವಾಗಿ ಹಿಂದೂ ಜನಜಾಗೃತಿ ಸಮಿತಿ ಹಿಂದೂಗಳ ಮೇಲೆ ಆಗುವ ಅನ್ಯಾಯ ತಡೆಯಲು ಪ್ರತಿಭಟನೆ ಮಾಡುವ ಮೂಲಕ ವಿರೋಧಿಸಿದೆ. ಸನಾತನ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಜೋತೆಗೆ, ಪಾಕಿಸ್ತಾನದಿಂದ ಬಂದ ಹಿಂದೂಗಳಿಗೆ ಸೌಲಭ್ಯ ಕಲ್ಪಿಸಲು, ಹಿಂದೂ ವಿಚಾರ ವಿರೋಧಿಸುವುವರ ವಿರುದ್ಧ ಸಮಿತಿ ವತಿಯಿಂದ ಹೋರಾಟ ಮಾಡಲಾಗಿತು, ಇದು ಹಿಂದೂ ರಾಷ್ಟ್ರ ಅದಕ್ಕೆ ಸರ್ಕಾರ ಸ್ಪಂದಿಸಬೇಕು, ಹಲವಾರು ರೀತಿಯಲ್ಲಿ ಹಿಂದೂತ್ವದ ವಿಚಾರಗಳಿಗಾಗಿ ಹೋರಾಡಲು ಸಮಿತಿ ಸದಾ ಸಿದ್ಧರಾಗಿಲು ಹಲವಾರು ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಮಂಜುನಾಥ ಕನಕಣವಾಡಿ, ರಾಜು ಧರಿಯಣ್ಣವರ ವೇದಿಕೆ ಮೇಲಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos