ಬೆಟ್ಟದ ಬಸವೇಶ್ವರ ಜಾತ್ರಾ ಮಹೋತ್ಸವ

ಬೆಟ್ಟದ ಬಸವೇಶ್ವರ ಜಾತ್ರಾ ಮಹೋತ್ಸವ

ರಾಯಚೂರು, ಡಿ. 17 : ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗಟಗಲ್ ಸುಕ್ಷೇತ್ರದಲ್ಲಿ ಐತಿಹಾಸಿಕ ಪ್ರಸಿದ್ದಿ ಪಡೆದಿರುವ ಬೆಟ್ಟದ ಬಸವೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.
ರಾಜ್ಯದ ನಾನಾ ಕಡೆಗಳಲ್ಲಿ ನಡೆಯುವ ಜಾತ್ರೆಗಿಂತಲೂ ಭಿನ್ನವಾಗೇ ನಡೆಯುವ ಬಸವಣ್ಣನ ಜಾತ್ರೆಯಲ್ಲಿ ಆಚರಣೆಗಿಂತ ಸೇವೆಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗುತ್ತದೆ. ಇಲ್ಲಿ ದೊಡ್ಡ ತೇರು ಇಲ್ಲ, ಮಹಾ ರಥೋತ್ಸವವೂ ನಡೆಯಲ್ಲ, ಉಚ್ಚಾಯಿ ಎಳೆಯುವುದಿಲ್ಲ ಆದ್ರೂ ಇಡೀ ಗ್ರಾಮ ಸಾವಿರಾರು ಜನ ಭಕ್ತರಿಂದ ತುಂಬಿಹೋಗುತ್ತದೆ.
ಇಲ್ಲಿನ ಬೆಟ್ಟದ ಮೇಲಿರುವ ಕರಿಗೂಳಿ ಎಂದು ಕರೆಯಿಸಿಕೊಳ್ಳುವ, ನಿಸರ್ಗದತ್ತವಾಗಿ ಬೃಹತ್ ಕಲ್ಲಿನಲ್ಲಿ ಮೂಡಿಬಂದಿರುವ ನಂದಿ ಬಸವಣ್ಣನಾಗಿದ್ದಾನೆ. ಜಾಗೃತ ಶಕ್ತಿಕೇಂದ್ರವಾಗಿರುವ ಈ ಸ್ಥಳದ ಬಗ್ಗೆ ಭಕ್ತರಲ್ಲಿ ಅಪಾರ ನಂಬಿಕೆಯಿದೆ. ನೂರಾರು ವರ್ಷಗಳ ಹಿಂದೆ ಬಸವಣ್ಣನ ಪರಮಭಕ್ತನಾದ ಶರಣ ರಾಚಯಪ್ಪ ತಾತ ಪವಾಡ ಪುರುಷನೆಂದೇ ಪ್ರಸಿದ್ದಿ ಪಡೆದವರು. ರಾಚಯಪ್ಪ ತಾತನ ಗದ್ದುಗೆಗೂ ಇಲ್ಲಿ ಬಹಳ ಮಹತ್ವವಿದೆ. ಇಲ್ಲಿಗೆ ಬರುವ ಭಕ್ತರು ಬಸವಣ್ಣ ಹಾಗೂ ರಾಚಯಪ್ಪ ತಾತನ ಸೇವೆಯಲ್ಲಿ ತೊಡಗುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos