ಕೇಂದ್ರ ಸರ್ಕಾರದ ಬಜೆಟ್ ನ ಮುಖ್ಯಾಂಶಗಳು

ಕೇಂದ್ರ ಸರ್ಕಾರದ ಬಜೆಟ್ ನ ಮುಖ್ಯಾಂಶಗಳು

ನವದೆಹಲಿ: ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್  ಲೋಕಸಭೆಯಲ್ಲಿ ಮಂಡಿಸಿದ ಎನ್‌ಡಿಎ ಸರಕಾರದ
2019-20ರ ಬಜೆಟ್ ಮುಖ್ಯಾಂಶಗಳು.

  • 2020ರ ವೇಳೆ ನವಭಾರತ ನಿರ್ಮಾಣ ಮಾಡಲಿದ್ದೇವೆ
  • ಭಾರತದಲ್ಲಿ ಭಯೋತ್ಪಾದನೆ, ಜಾತೀವಾದ ನಿಯಂತ್ರಣ ಮಾಡಿದ್ದೇವೆ
  • ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದ್ದೇವೆ
  • ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಹಣದುಬ್ಬರ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ
  • ಕಳೆದ 5 ವರ್ಷಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿದ್ದೇವೆ.
  • ಜಿಎಸ್‌ಟಿ ಹಾಗೂ ಇತರ ತೆರಿಗೆ ಮೂಲಕ ಆದಾಯ
  • ವಿದೇಶಿ ನೇರ ಹೂಡಿಕೆ(ಎಫ್‌ಡಿಎ) ಪ್ರಮಾಣ ಹೆಚ್ಚಳ
  • ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ
  • ದಿವಾಳಿ ಹಂತದಲ್ಲಿದ್ದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪುನಶ್ಚೇತನ.
  • ಪ್ರಾಕೃತಿಕ ಸಂಪನ್ಮೂಲಗಳ ಸಮರ್ಪಕ ಬಳಕೆ
  • ಬಡವರು, ಹಿಂದುಳಿದ ವರ್ಗಗಳ ಏಳಿಗೆಗೆ ಯೋಜನೆ.
  • ರಾಜ್ಯಗಳ ತೆರಿಗೆ ಪ್ರಮಾಣ ಶೇಕಡ 32 ರಿಂದ ಶೇಕಡ 42 ಕ್ಕೆ ಏರಿಸಿದ್ದೇವೆ.
  • ಕಳೆದ 5 ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಒಂದು ಕೋಟಿಗೂ ಅಧಿಕ ಮನೆಗಳ ನಿರ್ಮಾಣ.
  • ದೇಶದ 22ನೇ ಏಮ್ಸ್ ಹರಿಯಾಣದಲ್ಲಿ ಆರಂಭ.
  • ಎಲ್ಲ ವರ್ಗದ ಜನತೆಗೆ ಮೀಸಲಾತಿ ನೀಡುವ ಮೂಲಕ ಸಮಾನತೆ.
  • ದೇಶದ ಎಲ್ಲಾ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ.
  • ಜಾನುವಾರು ಸಾಕಾಣಿಕೆಗೆ ಬೇಕಾದ ಸಂಪೂರ್ಣ ನೆರವು.
  • ಹೊಸ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಮೂಲಕ ನಿರುದ್ಯೋಗ ನಿರ್ಮೂಲನೆಗೆ ಕ್ರಮ.
  • ಉಡಾನ್ ಯೋಜನೆ ಮೂಲಕ ಸಾಮಾನ್ಯ ಜನರಿಗೆ ವಿಮಾನ ಯಾನ
  • ದೇಶದಲ್ಲಿ 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದೇವೆ.
  • ಕೇಂದ್ರ ಸರ್ಕಾರದ ಬಜೆಟ್‍ ನ ಮುಖ್ಯಾಂಶಗಳು
  • ಮೊಬೈಲ್ ಡೇಟಾ ಬಳಕೆಯಲ್ಲಿ ಶೇಕಡಾ 50 ಪಟ್ಟು ಹೆಚ್ಚಳವಾಗಿದೆ
  • ಸಿನಿಮಾ ಕ್ಷೇತ್ರಕ್ಕೆ ಏಕಗವಾಕ್ಷಿ ಪದ್ಧತಿ ಜಾರಿ
  • ಐಟಿ ಇಲಾಖೆ ಸಂಪೂರ್ಣವಾಗಿ  ಆನ್ಲೈನ್ ಆಗಿದೆ.
  • ಮೇಕ್ ಇಂಡಿಯಾ ಯೋಜನೆಯಡಿಯಲ್ಲಿ ಮೋಬೈಲ್ ತಯಾರಿಸಲಾಗಿದೆ.
  • ಟ್ಯಾಕ್ಸ್‍ ಸಂಗ್ರಹದಲ್ಲಿ ಹೆಚ್ಚಳವಾಗಿದೆ.
  • ಮೇಕ್ ಇನ್‍ ಇಂಡಿಯಾ ಯೋಜನೆ ಮೂಲಕ 12 ಲಕ್ಷ ಯುವಕರಿಗೆ ಉದ್ಯೋಗ ನೀಡಿದ್ದೇವೆ.
  • ಗ್ರಾಮಗಳು ಡಿಜಿಟಲ್ ಗ್ರಾಮಗಳಾಗಿ ಬದಲಾಗಿವೆ
  • ಜನಧನ್, ಆಧಾರ್ ದೇಶದ ಗೇಮ್ ಚೇಂಜರ್

ಫ್ರೆಶ್ ನ್ಯೂಸ್

Latest Posts

Featured Videos