ವಿಶ್ವಕಪ್‌:  ಆಸೀಸ್ vs ಕಿವೀಸ್‌ ಹೈವೋಲ್ಟೇಜ್ ಪಂದ್ಯ

ವಿಶ್ವಕಪ್‌:  ಆಸೀಸ್ vs ಕಿವೀಸ್‌ ಹೈವೋಲ್ಟೇಜ್ ಪಂದ್ಯ

ಬೆಂಗಳೂರು: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 27ನೇ ಪಂದ್ಯದಲ್ಲಿ ಆಸೀಸ್ ಹಾಗೂ ಕಿವೀಸ್‌ ಮುಖಾಮುಖಿಯಾಗಿದೆ. ಈ ಪಂದ್ಯ ಅತ್ಯಂತ ರೋಚಕದಿಂದ ಕೂಡಿದೆ.

ಈ ಬಾರಿ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ತಂಡಗಳೆಂದೇ ಬಿಂಬಿತವಾಗಿರುವ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ಈಗ ಪರಸ್ಪರ ಕಾದಾಟಕ್ಕೆ ಸಿದ್ಧವಾಗಿವೆ. ನಾಕೌಟ್‌ ಪ್ರವೇಶದ ಹಾದಿ ಸುಗಮಗೊಳಿಸಿಕೊಳ್ಳುವುದು ಈ ತಂಡಗಳ ಗುರಿಯಾಗಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಸಾಂಪ್ರದಾಯಿಕ ವೈರಿಗಳ ಮಹತ್ವದ ಪಂದ್ಯಕ್ಕೆ ಇಂದು ಧರ್ಮಶಾಲಾ ಆತಿಥ್ಯ ವಹಿಸಲಿದೆ

ಧರ್ಮಶಾಲಾ ಪಿಚ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡುತ್ತಿದ್ದು, ವಿಶ್ವ ಶ್ರೇಷ್ಠ ವೇಗಿಗಳನ್ನು ಹೊಂದಿರುವ ಈ ತಂಡಗಳ ಪೈಕಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಸದ್ಯ ಎಲ್ಲರಲ್ಲಿದೆ. ನ್ಯೂಜಿಲೆಂಡ್‌ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿ ತೋರುತ್ತಿದ್ದು, ಈ ಪಂದ್ಯದಲ್ಲೂ ಬದಲಾವಣೆ ಸಾಧ್ಯತೆ ಕಡಿಮೆ. ಆದರೆ ಕಳೆದ 11 ಏಕದಿನ ಪಂದ್ಯದಲ್ಲಿ ಆಸೀಸ್‌ ವಿರುದ್ಧ ಕಿವೀಸ್‌ ಕೇವಲ 1 ಪಂದ್ಯ ಗೆದ್ದಿದ್ದು, ಸೋಲಿನ ಸರಪಳಿ ಕಳಚಲು ಎದುರು ನೋಡುತ್ತಿದೆ. ಸತತ 4 ಗೆಲುವುಗಳೊಂದಿಗೆ ಸೆಮೀಸ್‌ನತ್ತ ಮುನ್ನುಗ್ಗುತ್ತಿದ್ದ ಕಿವೀಸ್‌ಗೆ ಕಳೆದ ಪಂದ್ಯದಲ್ಲಿ ಸೋಲು ಎದುರಾಗಿದ್ದು, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ.

ಮೊದಲೆರಡು ಪಂದ್ಯ ಸೋತು ಕುಗ್ಗಿದ್ದ ಆಸೀಸ್‌ ಬಳಿಕ ಹ್ಯಾಟ್ರಿಕ್‌ ಗೆಲುವಿನ ಮೂಲಕ ಇತರ ತಂಡಗಳಿಗೆ ಮೈನಡುಕ ಹುಟ್ಟಿಸಿದ್ದು ಸುಳ್ಳಲ್ಲ. ವಾರ್ನರ್‌, ಮಾರ್ಷ್‌, ಮ್ಯಾಕ್ಸ್‌ವೆಲ್‌ ಸ್ಫೋಟಕ ಆಟ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos