ಪರಿಸರ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ

ಪರಿಸರ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ

ದೇವನಹಳ್ಳಿ, ಸೆ. 16: ಮನುಷ್ಯನು ತನ್ನ ದುರಾಸೆ ಇಂದಾಗಿ ಪರಿಸರ ಮೇಲೆ ಹೆಚ್ಚಿನ ಒತ್ತಡವನ್ನು ಏರುತ್ತಿರುವುದರಿಂದ ಪರಿಸರ ನಾಶ ವಾಗುತ್ತಿದೆ. ಅಂರ್ತಜಲ ಕುಸಿತ ಉಂಟಾಗಿ ನೀರಿನ ಸಮಸ್ಯೆ ತಲೆದೂರಿದೆ ಎಂದು ಸಾವಯುವ ಕೃಷಿಕ ಶಿವನಾಪುರ ಎಸ್ ಸಿ ರಮೇಶ್ ತಿಳಿಸಿದರು.

ನಗರದ ಪಾರಿವಾಳ ಗುಟ್ಟದಲ್ಲಿ ಜೌಷಧಿ ವನದ ಆವರಣದಲ್ಲಿ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲದಾಖೆ , ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಜೀವ ವೈವಿಧ್ಯ ನಿರ್ವಣಾ ಸಮಿತಿ, ಲಯನ್ಸ್ ಸಂಸ್ಥೆಯ ವತಿಯಿಂದ ಜೌಷಧಿ ವನದ ಸ್ವಚ್ಛತಾ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ನೈಸರ್ಗಿಕ ಪರಿಸರ ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕಾಳಜಿಯನ್ನು ಇಟ್ಟಿಕೊಂಡು ಕಾರ್ಯ ಮಾಡಬೇಕು. ಪಾರಿವಾಳ ಗುಟ್ಟದ ಜಾಗದಲ್ಲಿ ಹಿರಿಯರು 1950 ರಲ್ಲಿ 05 ಜನರು ಸೇರಿ ಕಡಲೇ ಕಾಯಿ ಪರಿಷೆಯನ್ನು ಪ್ರಾರಂಭಿಸಿದ್ದರು. ಈಗ ಸಾವಿರಾರು ಜನರು ಈ ಸ್ಥಳದಲ್ಲಿ ಪ್ರತಿ ವರ್ಷವೂ ಕಡಲೇ ಕಾಯಿ ಪರಿಷೆಗೆ ಸೇರುತ್ತಾರೆ. ಇಂತಹ ಐತಿಹಾಸಿಕ ಜಾಗಗಳು ಉಳಿಯಬೇಕು. ನಮ್ಮ ಊರು, ನಮ್ಮ ಸ್ಥಳಗಳು ಉಳಿಯಲು ಆಂದೋಲನದ ರೀತಿ ಆಗಬೇಕು 10 ಎಕರೆ ಜಾಗವಿದ್ದು, ಉಚಿತವಾಗಿ ಗಿಡ ಮತ್ತು ಗೊಬ್ಬರವನ್ನು ನೀಡುತ್ತೇನೆ ಇದೊಂದು ನೈಸರ್ಗಿಕ ತಾಣವನ್ನಾಗಿ ಆಗಬೇಕು. ಪ್ರಕೃತಿಯ ವಿರುದ್ಧವಾಗಿ ಮಾರಕ ಕೆಲಸ ಮಾಡಿದ ಪರಿಣಾಮ ಕೊಡಗು, ಕರಾವಳಿ, ಉತ್ತಮ ಕರ್ನಾಟಕದಲ್ಲಿ ನೆರೆ ಹಾವಳಿ ಸಂಭವಿಸಿದೆ. ಹಿಮಪಾತ ವಿಪರೀತ ತಾಪಮಾನದಿಂದ ಮತ್ತು ಶೀತ ಗಾಳಿ ಹೆಚ್ಚಳ ಕ್ಕೆ ಕಾರಣವೇನು ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ವಿಶ್ವೇಶ್ವರಯ್ಯ ಸಂಬಂಧಿಸಿದಂತೆ ಶಿಕ್ಷಕ ಬೀರ ಹನುಮಂತರಾಜು ಮಾತನಾಡಿ ಸರ್. ಎಂದು ಹೆಸರು ಬಂದಿದ್ದು ಮೊಟ್ಟಮೊದಲು ವಿಶ್ವೇಶ್ವರಯ್ಯ ಅವರಿಗೆ ಬಂದಿದೆ.1955 ರಲ್ಲಿ ಭಾರತರತ್ನ ಪ್ರಶಸ್ತಿ ಲಭಿಸಿದೆ ಮಂಡ್ಯ ಮತ್ತು ಮೈಸೂರು ರೈತರ ನೀರಿನ ಬವಣೆಯನ್ನು ನಿವಾರಿಸಲು ಕೆಆರ್‌ಎಸ್ ನ ಅಣೇಕಟ್ಟು ನಿರ್ಮಿಸುವ ಮೂಲಕ ನೀರಿನ ಸಮಸ್ಯೆಗೆ ಆಧ್ಯತೆ ನೀಡಿದ ಮಹಾನ್ ಚೇತನ. ಶ್ವದಾಧ್ಯಂತ ಎಲ್ಲಾ ಇಂಜಿನಿಯರ್‌ಗಳಿಗೂ ಮಾದರಿ ಪುರುಷರಾಗಿದ್ದಾರೆ.  ಕುಡಿಯುವ ನೀರು, ಅಣೇಕಟ್ಟು ಜಲವಿದ್ಯೂತ್ ಬೃಹತ್ ಕೈಗಾರಿಕೆಗಳನ್ನು ನಿರ್ಮಿಸುವ ಮೂಲಕ ಸ್ಮರಣೀಯರಾಗಿದ್ದರೆ. ಮಂಡ್ಯದಲ್ಲಿ ಪ್ರತಿಯೊಂದು ಮನೆಯಲ್ಲೂ ಸಹ ವಿಶ್ವೇಶ್ವರಯ್ಯ ನವರು ಭಾವಚಿತ್ರವನ್ನು ಇಟ್ಟಿದ್ದಾರೆ. 102 ವರ್ಷಗಳ ಕಾಲ ಬದುಕಿದ್ದರು. ದೇಶ ನಿಷ್ಟೆ ಹೊಂದಿದ ಸರ್.ಎಂ. ವಿಶ್ವೇಶ್ವರಯ್ಯ ಪ್ರಾಮಣಿಕ ಸಹೃದಯಿ, ಮುಂದಾಲೋಚನೆಯ ಸಾಧಕರು ಆಗಿದ್ದರು. ಶಿಸ್ತು ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಹೊಂದಿದ್ದರು. ಸ್ವಾವಲಂಬಿ ಭಾರತದ ಕನಸು ಕಂಡ ಅಗಾಧ ವ್ಯಕ್ತಿತ್ವದ ಪ್ರತಿರೂಪದ ಬದ್ಧತೆ, ಬುದ್ಧಿವಂತಿಕೆ, ಪರಿಶ್ರಮ, ಪ್ರಾಮಾಣಿಕತೆ, ದಕ್ಶತೆ ಇವರಲ್ಲಿ ಮೈಗೂಡಿಸಿಕೊಂಡಿದ್ದರು ಎಂದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ಶ್ರೀರಾಮಯ್ಯ ಮಾತನಾಡಿ, ಪ್ರಕೃತಿಯಿಂದ ಎಲ್ಲವನ್ನು ಪಡೆದುಕೊಳ್ಳುವ ನಾವೂ ಪ್ರಕೃತಿ ನಾವು ಏನು ನೀಡುತ್ತಿದ್ದೇವೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಎಸ್ ಆರ್ ಮುನಿರಾಜು ಮಾತನಾಡಿ ಪಾರಿವಾಳ ಗುಟ್ಟ ಒಂದು ಐತಿಹಾಸಿಕ ಪ್ರಸಿದ್ಧ ಸ್ಥಳವಾಗಿರುವುದರಿಂದ ಇದರ ಉಳಿವಿಗಾಗಿ ಎಲ್ ಐಸಿ ಮುನಿರಾಜು ಹಾಗೂ ಆಂಜನೇಯ ಸ್ವಾಮಿ ಭಕ್ತ ಮಂಡಳಿ ಶ್ರಮದಿಂದ ಈ ಜಾಗ ಉಳಿಯಲು ಅನುಕೂಲವಾಗಿದೆ ಎಂದರು.

ಈ ವೇಳೆಯಲ್ಲಿ ಈ ವೇಳೆಯಲ್ಲಿ ಉಪತಹಶೀಲ್ದಾರ್ ಗಂಗಾಧರ್, ಜೈ ಮಾರುತಿ ಭಕ್ತ ಮಂಡಳಿ ಟ್ರಸ್ಟ್ ಗೌರವಾಧ್ಯಕ್ಷ ಮುನಿರಾಜು, ತಾಪಂ ಮಾಜಿ ಅಧ್ಯಕ್ಷ ಬಿ.ಕೆ ಶಿವಪ್ಪ, ದೇವನಹಳ್ಳಿ ಅಡ್ವೆಂಚಸ್ ಅಸೋಸಿಯೇಷನ್ ಅಧ್ಯಕ್ಷ ಶಶಿಧರ್, ಕಾರ್ಯದರ್ಶಿ ಮಂಜುನಾಥ್, ಸರಸ್ವತಿ ಸಂಗೀತ ಶಾಲೆ ಕಾರ್ಯದರ್ಶಿ ಗೋಪಾಲ್ ಮಾಸ್ಟರ್ , ಖಜಾಂಚಿ ಮಂಜುನಾಥ್, ಜೆಸಿಐ ಸಂಸ್ಥೆಯ ಅರವಿಂದ್ , ಎ ಎಸ್‌ಐ ಲೋಕೇಶ್, ದೇವನಹಳ್ಳಿ ಪೋಲೀಸ್ ಠಾಣೆಯ ಪಾಟೀಲ್, ಲಯನ್ಸ್ ಕಾರ್ಯದರ್ಶಿ ಜಯಪ್ರಕಾಶ್, ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos