ಹೆತ್ತ ತಾಯಿಗೆ ಬೆಂಕಿ ಹಚ್ಚಿನೇಣಿಗೆ ಶರಣಾದ ಮಗ

ಹೆತ್ತ ತಾಯಿಗೆ ಬೆಂಕಿ ಹಚ್ಚಿನೇಣಿಗೆ ಶರಣಾದ ಮಗ

ಚಿಂತಾಮಣಿ, ಜು. 27 : ಹೆತ್ತ ತಾಯಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಮಗನೊಬ್ಬ ನಂತರ ತಾನೂ ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ದಾರುಣ ಘಟನೆ ತಾಲೂಕಿನ ಕಸಬಾ ಹೋಬಳಿಯ ಮಾಡಿಕೆರೆಯಲ್ಲಿ ನಡೆದಿದೆ. ಮಾಡಿಕೆರೆ ವೆಂಕಟಮ್ಮ(85) ಹಾಗೂ ಮಗ ಜಯರಾಮಪ್ಪ(50) ಮೃತರು.
85 ವರ್ಷ ವಯಸ್ಸಾಗಿದ್ದ ತಾಯಿ ವೆಂಕಟಮ್ಮ ವಯೋಸಹಜ ಅನಾರೋಗಕ್ಕೆ ತುತ್ತಾಗಿದ್ದರು ಎನ್ನಲಾಗಿದ್ದು, ಆಕೆಯ ಸೇವೆ ಮಾಡಲು ಬೇಸತ್ತ ಮಗ ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಬಚ್ಚಲು ಮನೆಯಲ್ಲಿ ತಾಯಿಗೆ ಬೆಂಕಿ ಹಚ್ಚಿದ್ದು, ಮನೆಯಿಂದ ಹೊರಬರಲಾಗದೆ ಅಲ್ಲಿಯೇ ಸುಟ್ಟು ಪ್ರಾಣ ಬಿಟ್ಟಿದ್ದಾರೆ. ನಶೆ ಇಳಿದ ನಂತರ ಜಯರಾಮಪ್ಪ ತಾಯಿಯ ದೇಹ ಕಂಡು ಜಿಗುಪ್ಸೆಗೊಂಡು ತಾನೂ ನೇಣಿಗೆ ಶರಣಾಗಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos