ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ  ನಾಪತ್ತೆ

ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ  ನಾಪತ್ತೆ

ಚಾಮರಾಜನಗರ, ಏ. 16, ನ್ಯೂಸ್ ಎಕ್ಸ್ ಪ್ರೆಸ್: ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯೊಬ್ಬರು ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿದ್ಧಾರೆ. ಹೆರಿಗೆ ನೋವಿನಲ್ಲಿದ್ದ ಗರ್ಭಿಣಿಯೊಬ್ಬರು ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ. ಟಿ‌.ನರಸೀಪುರದ ತಾಲೂಕಿನ ಮೂಗೂರು ಗ್ರಾಮದ ವನಿತಾ(21) ನಾಪತ್ತೆಯಾದ ಗರ್ಭಿಣಿ. ವನಿತಾಗೆ 9 ತಿಂಗಳು 4 ದಿನವಾಗಿದ್ದು ಹೆರಿಗೆ ನೋವು ಬಂದಿದ್ದರಿಂದ ಜಿಲ್ಲಾಸ್ಪತ್ರೆಗೆ ಪತಿ ಸೋಮು ಕರೆತಂದಿದ್ದರು ಎನ್ನಲಾಗಿದೆ. ವನಿತಾಳನ್ನು ಯಾರೋ ಅಪಹರಿಸಿರಬೇಕು ಎಂದು ಸೋಮು ಶಂಕೆ ವ್ಯಕ್ತಪಡಿಸಿದ್ದು, ಆಕೆಯ ಬಳಿ 3 ಸಾವಿರ ರೂ. ಹಣ ಇತ್ತು ಎನ್ನಲಾಗಿದೆ. ಈ ಸಂಬಂಧ ಚಾಮರಾನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos