ಮತದಾರರ ಪಟ್ಟಿ ಸೇರ್ಪಡೆಗೆ ಹೆಲ್ಪ್ ಲೈನ್

ಮತದಾರರ ಪಟ್ಟಿ ಸೇರ್ಪಡೆಗೆ ಹೆಲ್ಪ್ ಲೈನ್

ದೇವನಹಳ್ಳಿ, ಸೆ. 28: ಮತದಾರರ ಪಟ್ಟಿಯಲ್ಲಿ ದೋಷ ಕಂಡು ಬಂದಲ್ಲಿ ತಕ್ಷಣವೇ ಸಂಬಂಧಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಅರ್ಹ ಮತದಾರರು ಯಾವುದೇ ಕಾರಣಕ್ಕೂ ತಮ್ಮ ಹಕ್ಕಿನಿಂತ ವಂಚಿತರಾಗಬಾರದೆಂಬ ದೃಷ್ಠಿಯಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಬಳಸಬೇಕು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದಂತೆ ವಿಧ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾರರ ದೋಷ ಪಟ್ಟಿಯನ್ನು ಸರಿಪಡಿಸಲು ಮತ್ತು 01/01/2020 ಕ್ಕೆ 18 ವರ್ಷ ಪೂರ್ಣಗೊಳ್ಳುವ ಮತದಾರರು ತಮ್ಮ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಭಾರತ ಚುನಾವಣಾ ಆಯೋಗ ವೋಟರ್ ಹೆಲ್ಪ್ ಲೈನ್ ಮೊಬೈಲ್ ಆ್ಯಫ್ ಅನ್ನು ಪರಿಚಯಿಸಲಾಗಿದೆ.  ಈ ಮೊಬೈಲ್ ಆ್ಯಫ್ ಅನ್ನು ಗೋಗಲ್ ಸ್ಟೋರ್ ಆ್ಯಫ್ ನಿಂದ ಪಡೆಯಬಹುದು.

ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳ್ನು ಪರಿಶೀಲಿಸಲು ಹೆಸರನ್ನು ತೆಗೆದು ಹಾಕಲು, ಪರಿಶೀಲನೆ ಮತ್ತು ದೃಡೀಕರಣ ತಿದ್ದುಪಡಿಗಳಿಗಾಗಿ ಆ್ಯಫ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. ಪಾಸ್ ಪೋಟ್, ಆಧಾರ್ ಕಾಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಚಾಲನಾ ಪರವಣಿಗೆ , ಸರ್ಕಾರಿ/ಅರೆ ಸರ್ಕಾರಿ ನೌಕರರ ಹೊಂದಿರುವ ಗುರುತಿನ ಚೀಟಿ , ರೈತರ ಗುರುತಿನ ಚೀಟಿ , ಚುನಾವಣಾ ಆಯೋಗ ನಮೂದಿಸಿರುವ ಇನ್ನಿತರೆ ದಾಖಲೆಗಳನ್ನು ನೀಡಬಹುದು. ಯಾವುದೇ ದಾಖಲಾತಿಗಳಲ್ಲಿ ಒಂದನ್ನು ದಾಖಲೆ ರೂಪದಲ್ಲಿ ಮೊಬೈಲ್ ಆ್ಯಫ್ ಮೂಲಕ ಅಪ್ ಲೋಡ್ ಮಾಡಬಹುದು.

ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಸಾಮಾನ್ಯ ಕೇಂದ್ರಗಳನ್ನು ತೆರೆಯಲಾಗಿದೆ. 1950 ಮತದಾರರ ಸಹಾಯವನ್ನು ಸಂಪರ್ಕಿಸಬಹುದು. ನಮೂನೆ 08 ರಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬೇಕು. ನಮೂನೆ 07 ಸ್ಥಳ ಬದಲಾವಣೆ, ಮರಣ, ನಮೂನೆ 06 ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಸರ್ವರಿಗೂ ಅನುಕೂಲಕರವಾದ ಪ್ರಜಾ ಪ್ರಭುತ್ವವನ್ನು ನಿರ್ಮಾಣ ಮಾಡುವ ಹಕ್ಕು ಇರುವುದರಿಂದ ಮತದಾರರು ತಮ್ಮ ಮತ ಪಟ್ಟಿಯಲ್ಲಿ ಪರಿಷ್ಕರಿಸಿಕೊಳ್ಳುವುದು ಅತ್ಯವಶ್ಯವಿದೆ ಎಂದರು. ಮತದಾನ ಕೇವಲ ಹಕ್ಕು ಮಾತ್ರವಲ್ಲ ಅದು ಕರ್ತವ್ಯ ಕೂಡ ಆಗಿದೆ. 18 ವರ್ಷ ಪೂರೈಸಿದ ಪ್ರತಿಯೊಬ್ಬರೂ ಸ್ವ ಇಚ್ಛೆಯಿಂದ ಮತ ಚಲಾಯಿಸುವ ಹಕ್ಕನ್ನು ಸಂವಿಧಾನವು ನೀಡಿದೆ ಎಂದರು.

ಈ ವೇಳೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ಪುರಸಭಾ ಕಂದಾಯಾಧಿಕಾರಿ ರಾಜೇಂದ್ರ, ಪುರಸಭಾ ಅಭ್ಯಂತರ ನೇತ್ರಾವತಿ, ಹಿರಿಯ ಆರೋಗ್ಯ ಸಹಾಯಕರಾದ ಬಿಜಿ, ತೃಪ್ತಿ, ಕಾಲೇಜು ಪ್ರಭಾರ ಪ್ರಾಂಶುಪಾಲ ರುದ್ರಮನಿ, ಪ್ರೌಡಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್, ಪ್ರಭಾರ ಉಪ ಪ್ರಾಂಶುಪಾಲ ಬಸವರಾಜ್ ಕೆಂಚನ ಗೌಡ, ರಾಜಸ್ವ ನಿರೀಕ್ಷಕ ರಘು, ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos