ಹೆಚ್ಚು ಬಜೆಟ್ ನ ಚಿತ್ರ ‘ಬಿಲ್ಲ ರಂಗ ಬಾಷ’

ಹೆಚ್ಚು ಬಜೆಟ್ ನ ಚಿತ್ರ ‘ಬಿಲ್ಲ ರಂಗ ಬಾಷ’

ಬೆಂಗಳೂರು, ಮಾ.11, ನ್ಯೂಸ್ ಎಕ್ಸ್ ಪ್ರೆಸ್: ಕಿಚ್ಚ ಸುದೀಪ್ ಅಭಿನಯದ ಮುಂದಿನ ಚಿತ್ರ ‘ಬಿಲ್ಲ ರಂಗ ಬಾಷ’ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕೇವಲ ಟೈಟಲ್ ಮೂಲಕವೇ ಅಭಿಮಾನಿಗಳ ನಿದ್ದೆ ಹಾಳುಮಾಡಿರುವ ‘ಬಿಲ್ಲ ರಂಗ ಬಾಷ’ ಚಿತ್ರದಿಂದ ಮತ್ತೊಂದು ಕನ್ನಡ ಇಂಟ್ರಸ್ಟಿಂಗ್ ನಲ್ಲಿ ಸುದ್ದಿ ಹೊರಬಿದ್ದಿದೆ. ಈಗಾಗಲೇ ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿಗಳು ‘ಬಿಲ್ಲ ರಂಗ ಬಾಷ’ನ ಜಪ ಮಾಡುತ್ತಿದ್ದಾರೆ.

ಅದರ ಜೊತೆಗೀಗ ಚಿತ್ರದ ಬಜೆಟ್ ವಿಷಯಕ್ಕೆ ಬಂದರೆ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ದಾಖಲೆ ಬರೆಯಲು ಸಿದ್ದವಾಗೆದೆ. ಹೌದು, ಮೂಲಗಳ ಪ್ರಕಾರ ಈ ಚಿತ್ರದ ಬಜೆಟ್ ಬರೊಬ್ಬರಿ 75 ಕೋಟಿ ರೂಗಳಿಗು ಅಧಿಕ ಇರಲಿದೆಯಂತೆ. ಅಂದ ಮೇಲೆ, ಸುದೀಪ್ ಚಿತ್ರಗಳ ಲಿಸ್ಟ್ ಗಳಲ್ಲಿಯೇ ‘ಬಿಲ್ಲ ರಂಗ ಬಾಷ ‘ಅತಿ ದೊಡ್ಡ ಮೊತ್ತದ ಚಿತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನೂ, ‘ಬಿಲ್ಲ ರಂಗ ಬಾಷ’ ಕಿಚ್ಚನ ಹೋಮ್ ಬ್ಯಾನರ್ ಸುಪ್ರಿಯಾನ್ವಿ ಪಿಕ್ಟರ್ ಸ್ಟೂಡಿಯೋ ನಲ್ಲಿ ಚಿತ್ರ ಮೂಡಿಬರಲಿದೆ. ಚಿತ್ರಕ್ಕೆ ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಅನೂಪ್ ಸ್ಕ್ರಿಪ್ಟ್ ಕೆಲಸದಲ್ಲಿ ನಿರತರಾಗಿದ್ದಾರೆ.

ಸುದೀಪ್ ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಸದ್ಯ ‘ಪೈಲ್ವಾನ್’ ಚಿತ್ರೀಕರಣ ಮುಗಿಸಿ ‘ಕೋಟಿಗೊಬ್ಬ-3’ ಚಿತ್ರದಲ್ಲಿ ತೊಡಗಿರುವ ಅಭಿನಯ ಚಕ್ರವರ್ತಿ, ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಅಭಿನಯದ ‘ದಂಬಾಂಗ್ -3’ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಚಿತ್ರಗಳು ಮುಗಿದ ಬಳಿಕ ಕಿಚ್ಚ ‘ಬಿಲ್ಲ ರಂಗ ಬಾಷ’ನಾಗಿ ಎಂಟ್ರಿ ಕೊಡಲಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos