ಹೆಬ್ಬಾವು, ಕಾಳಿಂಗ ಸರ್ಪ ಕಾದಾಟ

ಹೆಬ್ಬಾವು, ಕಾಳಿಂಗ ಸರ್ಪ ಕಾದಾಟ

ಕುಂದಾಪುರ , ಸೆ. 10 : ಬೈಂದೂರು ತಾಲೂಕು ಯಡಮೊಗೆ ಗ್ರಾಮ ಮಡಿವಾಳಮಕ್ಕಿ ಮನೆ ಬಳಿ ಭಾನುವಾರ ಮಧ್ಯಾಹ್ನ ಕಾದಾಡುತ್ತಿದ್ದ ಕಾಳಿಂಗ ಸರ್ಪ ಹಾಗೂ ಹೆಬ್ಬಾವುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೇರ್ಪಡಿಸಿ, ರಕ್ಷಿತಾರಣ್ಯದಲ್ಲಿ ಬಿಟ್ಟಿದ್ದಾರೆ.
ಹೆಬ್ಬಾವು ನುಂಗಲು ಕಾಳಿಂಗ ಸರ್ಪ ಹೆಬ್ಬಾವಿನ ತಲೆ ಕಚ್ಚಿ ಹಿಡಿದರೆ, ಹೆಬ್ಬಾವು ಕಾಳಿಂಗ ಸರ್ಪವನ್ನು ಸುತ್ತು ಹಾಕಿಕೊಂಡಿತ್ತು. ಸುಮಾರು ಅರ್ಧಗಂಟೆವರೆಗೆ ಹೋರಾಟ ನಡೆದಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಫಾರೆಸ್ಟರ್ ಕೃಷ್ಣಮೂರ್ತಿ ಹೆಬ್ಬಾರ್ ಹಾಗೂ ನಾಗರಾಜ್, ಸತೀಶ್ ಕುಲಾಲ್ ಹೋರಾಟ ಮಾಡುತ್ತಿದ್ದ ಎರಡು ಹಾವುಗಳನ್ನು ಬೇರ್ಪಡಿಸಿ ಪಶ್ಚಿಮ ಘಟ್ಟ ಅರಣ್ಯದಲ್ಲಿ ಬಿಟ್ಟಿದ್ದಾರೆ.
ಹೆಬ್ಬಾವು ಕಾಳಿಂಗ ಸರ್ಪದ ಆಹಾರವಾಗಿದ್ದು, ಹೆಬ್ಬಾವನ್ನು ಕಾಳಿಂಗ ಸರ್ಪ ಕಚ್ಚದೆ ನುಂಗಲು ಯತ್ನಿಸುತ್ತಿತ್ತು. ಕಾಳಿಂಗದ ಬಾಯಿಂದ ತಪ್ಪಿಸಿಕೊಳ್ಳುತ್ತಿದ್ದ ಹೆಬ್ಬಾವು ಕಾಳಿಂಗ ಸರ್ಪ ಸುತ್ತ ಸುತ್ತಿಕೊಂಡಿತ್ತು. ಕಾಳಿಂಗ ಸರ್ಪ 12 ಅಡಿ ಉದ್ದವಿದ್ದು, ಹೆಬ್ಬಾವು 8 ಅಡಿ ಉದ್ದವಿತ್ತು.

ಫ್ರೆಶ್ ನ್ಯೂಸ್

Latest Posts

Featured Videos