ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಂದುಕೊಂಡಸ್ಟು ಮಳೆಯಾಗಿರಲ್ಲಿಲ್ಲಾ ಇದರಿಂದ ರೈತರೂ ಕಂಗಾಲಾಗಿದ್ದರು. ಹಾಗೂ ನೀರಿಗೆ ಕೊರತೆ ಉಂಟಾಗಿದೆ. ಆದರೆ ದೆಹಲಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಶುಕ್ರವಾರದ ಭಾರಿ ಮಳೆಯಿಂದಾಗಿ ಕನಿಷ್ಠ ತಾಪಮಾನವು 23.7 ಡಿಗ್ರಿ ಸೆಲ್ಸಿಯಸ್’ಗೆ ಇಳಿದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರದಂದು ಬಲವಾದ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಇಲ್ಲಿನ ಜನರಿಗೆ ಆಹ್ಲಾದಕರ ವಾತಾವರಣವನ್ನು ನೀಡಿದೆ. ಹವಾಮಾನ ಏಜೆನ್ಸಿಗಳ ಪ್ರಕಾರ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಚಲನೆ ಸಕ್ರಿಯವಾಗಿದ್ದು, ಉತ್ತಮ ಮಳೆಯಾಗುತ್ತಿದೆ. ಇದಲ್ಲದೇ ಮಾನ್ಸೂನ್ ಟ್ರಫ್ ಕೂಡ ತನ್ನ ಯಥಾಸ್ಥಿತಿಯಿಂದ ದಕ್ಷಿಣದತ್ತ ಸಾಗುತ್ತಿದ್ದು, ಇದರಿಂದಾಗಿ ದೆಹಲಿಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಪ್ರಕಾರ, ಮುಂದಿನ 5 ದಿನಗಳಲ್ಲಿ ದೆಹಲಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಶುಕ್ರವಾರದ ಭಾರಿ ಮಳೆಯಿಂದಾಗಿ ಕನಿಷ್ಠ ತಾಪಮಾನವು 23.7 ಡಿಗ್ರಿ ಸೆಲ್ಸಿಯಸ್’ಗೆ ಇಳಿದಿದೆ, ಇದು ಈ ಋತುವಿನ ಸರಾಸರಿಗಿಂತ ಒಂದು ಡಿಗ್ರಿ ಕಡಿಮೆ ಎಂದು ಹೇಳಲಾಗುತ್ತಿದೆ.
ದೆಹಲಿಯ ಹಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯ ಕಾರಣದಿಂದ ಪ್ರದೇಶಗಳು ಜಲಾವೃತಗೊಂಡಿದ್ದು, ಈ ಕಾರಣದಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಕ್ಷರಧಾಮ ಮಂದಿರ ಮೆಟ್ರೊ ನಿಲ್ದಾಣದ ಹೊರಗೆ ಮತ್ತು ವಿಕಾಸ್ ಮಾರ್ಗ್ ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.