ಅಪಾಯದ ಹಿನ್ನಲೆ ಉಡುಪಿ-ಶಿವಮೊಗ್ಗ ರಾಷ್ಟ್ರೀಯ(169ಎ) ಹೆದ್ದಾರಿ ಬಂದ್

ಅಪಾಯದ ಹಿನ್ನಲೆ ಉಡುಪಿ-ಶಿವಮೊಗ್ಗ ರಾಷ್ಟ್ರೀಯ(169ಎ) ಹೆದ್ದಾರಿ ಬಂದ್

ಉಡುಪಿ, ಆ.06: ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದಲೇ ಗಾಳಿ, ಗುಡುಗು, ಸಿಡಿಲು ಸಹಿತ ಮುಂಗಾರು ಅಬ್ಬರಿಸಿದ್ದು, ಧಾರಾಕಾರ ಮಳೆಯಾಗಿದ್ದು ಅಪಾಯದ ಮಟ್ಟ ತಲುಪಿದೆ.
ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಹೆಬ್ರಿ ಸಮೀಪದ ಬಂಡಿ ಮಠದಲ್ಲಿ ಸೀತಾನದಿ ಉಕ್ಕಿ ಹರಿದು ರಾಷ್ಟ್ರೀಯ ಹೆದ್ದಾರಿ (169ಎ) ಕಡಿತಗೊಂಡಿದೆ. ಅಪಾಯದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದು, ಪ್ರತ್ಯೇಕ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳುವವರು ಹೆಬ್ರಿಯಿಂದ ಕುಚ್ಚೂರಿಗೆ ತಿರುವು ಪಡೆದು ಮಾಂಡಿ ಮೂರುಕೈ ಮಾರ್ಗವಾಗಿ ಸೋಮೇಶ್ವರ ಮೂಲಕವಾಗಿ ತೆರಳುವಂತೆ ವ್ಯವಸ್ಥೆ ಮಾಡಲಾಗಿದೆ.

ಉಳಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹಲವು ಮನೆಗಳ ಮೇಲೆ ಮರ ಬಿದ್ದಿದೆ. ವಿದ್ಯುತ್ ಕಂಬ ನೆಲಕ್ಕುರುಳಿ ಸಾಕಷ್ಟು ಹಾನಿ ಸಂಭವಿಸಿದೆ. ಕುಂದಾಪುರ, ಕಾರ್ಕಳ ಭಾಗದಲ್ಲಿ ವ್ಯಾಪಕ ಮಳೆಯಾಗಿದ್ದು, ಕೃತಕ ನೆರೆ ಸೃಷ್ಟಿಯಾಗಿದ್ದು ಉಳಿದ ಕಡೆ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಪ್ರವಾಹದಲ್ಲಿ ಸಿಲಿಕಿದವರ ರಕ್ಷಣೆಗಾಗಿ ರಕ್ಷಣಾಪಡೆ ಹರ ಸಹಾಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos